30 ಬಾಟ್ಲಿ ತೆಂಗಿನೆಣ್ಣೆ, 1 ಪೆಟ್ಟಿಗೆ ಆಪಲ್ ಕಳವುಗೈದ ಆರೋಪಿ ಸೆರೆ

ಕೊಚ್ಚಿ: ಎರ್ನಾಕುಳಂ ಆಲುವಾದ ವ್ಯಾಪಾರ ಸಂಸ್ಥೆಯಿಂದ ತೆಂಗಿನೆಣ್ಣೆ ಕಳವುಗೈದ ಪ್ರಕರಣದಲ್ಲಿ ಆರೋಪಿ ಸೆರೆ. ಅಸ್ಸಾಂ ನಿವಾಸಿ ಜಾವೇದ್ ಅಲಿಯನ್ನು ಆಲುವಾ ಪೊಲೀಸರು ಪೆರುಂಬಾವೂರ್‌ನಿಂದ ಸೆರೆ ಹಿಡಿದಿದ್ದಾರೆ. ನಿನ್ನೆ ತೋಟ್ ಮುಖಂನ ಶಾ ವೆಜಿಟೇಬಲ್ಸ್‌ನಿಂದ ಕಳವು ನಡೆಸಲಾಗಿತ್ತು. 30 ಬಾಟಲಿ ತೆಂಗಿನೆಣ್ಣೆ ಹಾಗೂ 1 ಪೆಟ್ಟಿಗೆ ಆಪಲ್, ೫೦೦೦ದಷ್ಟು ನಗದು ಇಲ್ಲಿಂದ ಕಳವುಗೈಯ್ಯಲಾಗಿತ್ತು. 100ರಷ್ಟು ಸಿಸಿ ಟಿವಿ ದೃಶ್ಯಗಳನ್ನು ತಪಾಸಣೆಗೊಳಪಡಿಸಿ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ಕೋತಮಂಗಲದಿಂದ ಕಳವುಗೈದ ಓಮ್ನಿ ವ್ಯಾನ್‌ನಲ್ಲಿ ರಾತ್ರಿ ಸಂಚಾರ ನಡೆಸಿ ಕಳವು ನಡೆಸುವುದು ಈತನ ಹವ್ಯಾಸವಾಗಿತ್ತು. ಕಳವುಗೈದ ಸಾಮಗ್ರಿಗಳನ್ನು ಅನ್ಯರಾಜ್ಯ ಕಾರ್ಮಿಕರಿಗೆ ಈತ ಮಾರಾಟ ಮಾಡುತ್ತಿದ್ದನು. ನಿನ್ನೆ ರಾತ್ರಿ ಎಸ್‌ಪಿಯ ಪ್ರತ್ಯೇಕ ತಂಡ ನಡೆಸಿದ ತನಿಖೆಯಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ.

You cannot copy contents of this page