3000 ಇ-ಸಿಗರೇಟ್ ಪತ್ತೆ ಪ್ರಕರಣ: ಇಬ್ಬರ ಸೆರೆ
ಕಾಸರಗೋಡು: ಕಾರಿನಲ್ಲಿ ಇ-ಸಿಗರೇಟ್ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಪೊಸೋಟು ನಿವಾಸಿ ಪಿ.ಎಂ. ಮುಹಮ್ಮದ್ ಬಶೀರ್ (54) ಮತ್ತು ಮೀಯಪದವು ಬಟ್ಯಪದವಿನ ಮೊಹಮ್ಮದ್ ಶೆರೀಫ್ (41) ಬಂಧಿತರಾದ ಆರೋಪಿಗಳು. ಕಾಸರಗೋಡು ಪೊಲೀಸ್ ಠಾಣೆಯ ಎಸ್ಐ ಎ.ಸಿ. ಶಾಜು ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ. ನಗರದ ಎಂಜಿ ರಸ್ತೆಯ ಆನೆಬಾಗಿಲು ಪರಿಸರದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಂಚರಿಸುತ್ತಿದ್ದ ಮಹಾರಾಷ್ಟ್ರ ನೋಂದಾಯಿತ ಕಾರಿನಲ್ಲಿ ಸಾಗಿಸುತ್ತಿದ್ದ 3000 ಇ ಸಿಗರೇಟ್ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಕಾರಿನ ಹಿಂದುಗಡೆ ಸೀಟಿನ ಅಡಿಭಾಗದಲ್ಲಿ 10 ಪೆಟ್ಟಿಗೆಗಳಲ್ಲಾಗಿ ಮಾಲು ಬಚ್ಚಿಡಲಾಗಿ ತ್ತೆಂದೂ, ಈ ಮಾಲನ್ನು ತಾವು ಮಲಪ್ಪುರದಿಂದ ಪುಣೆಗೆ ಸಾಗಿಸಲೆಂದು ತರುತ್ತಿದ್ದೆವೆಂದು ಆರೋಪಿಗಳು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾಲು ಸಾಗಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾಧಾರಣವಾಗಿ ಇ-ಸಿಗರೇಟ್ಗೆ 70ರೂ.ನಿಂದ 1500 ರೂ. ಬೆಲೆಗೆ ಮಾರಾಟಮಾ ಡಲಾಗುತ್ತಿದೆ. ಕಳೆದ ಶನಿವಾರ ಬಂದ್ಯೋಡಿನಲ್ಲಿ ಕುಂಬಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇ-ಸಿಗರೇಟ್ ವಶಪಡಿಸಲಾಗಿತ್ತು. ಅದಕ್ಕೆ ಸಂಬಂ ಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇ-ಸಿಗರೇಟ್ ಮಾರಾಟ ಮತ್ತು ಉಪ ಯೋಗಕ್ಕೆ ಕೇರಳದಲ್ಲಿ ನಿಷೇಧ ಹೇರಲಾಗಿದೆ. ಮಾಲುಗಳನ್ನು ಹೆಚ್ಚಾಗಿ ಗಲ್ಫ್ ಮೂಲಕ ಕೇರಳಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿ ದೆಯೆಂದೂ ಪೊಲೀಸರು ತಿಳಿಸಿದ್ದಾರೆ.