302 ಗ್ರಾಂ ಗಾಂಜಾ ವಶ: ಆರೋಪಿ ಪರಾರಿ
ಕುಂಬಳೆ: ಕುಂಬಳೆ ರೇಂಜ್ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಬೈಕ್‌ನಲ್ಲಿ ಸಾಗಿಸುತ್ತಿದ್ದ 302 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಈ ಸಂಬಂಧ ಕಯ್ಯಾರು ಗ್ರಾಮದ ಕರೋಳಿ ಎಂಬಲ್ಲಿನ ಅಬ್ದುಲ್ ರಹ್ಮಾನ್ ಅಫ್ಸಲ್ ಎಂಬಾತನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಕೇಸುದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಆರೋಪಿ ಓಡಿ ಪರಾರಿಯಾಗಿ ದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಂಬಳೆ ಅಬಕಾರಿ ಇನ್‌ಸ್ಪೆಕ್ಟರ್ ಶ್ರಾವಣ್ ಕೆ.ವಿ ನೇತೃತ್ವದಲ್ಲಿ ಮೊನ್ನೆ ಸಂಜೆ ಕುಬಣೂರು ಸಫಾ ನಗರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸಿಇಒಗಳಾದ ಅಖಿಲೇಶ್ ಎಂ.ಎಂ, ಜಿತಿನ್ ವಿ, ರಾಹುಲ್ ಇ, ಚಾಲಕ ಪ್ರವೀಣ್ ಕುಮಾರ್ ಕಾರ್ಯಾಚರಣೆ ತಂಡದಲ್ಲಿದ್ದರು.