330 ಗ್ರಾಂ ಎಂಡಿಎಂಎ ವಶ : ಕಾಸರಗೋಡು ನಿವಾಸಿ ಸಹಿತ ಇಬ್ಬರ ಸೆರೆ
ಕಾಸರಗೋಡು: ರಾಜ್ಯದಲ್ಲಿ ಮಾದಕವಸ್ತು ಬೇಟೆಯಂಗವಾಗಿ ತೃಶೂರಿನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮಾದಕವಸ್ತು ಸಹಿತ ಕಾಸರಗೋಡು ನಿವಾಸಿ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಕಾಸರಗೋಡಿನ ಕೀಯೂರು ಪಡಿಞಾರ್ ನಿವಾಸಿ ನಜೀಬ್, ಗುರುವಾಯೂರಿನ ಜಿನೀಶ್ ಎಂಬಿವರು ಸೆರೆಗೀಡಾಗಿದ್ದಾರೆ. ಇವರ ಕೈಯಿಂದ 330 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಮಾದಕವಸ್ತು ವಿರುದ್ಧ ಸ್ಕ್ವಾಡ್‌ನ ಸಹಕಾರದೊಂದಿಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ತೃಶೂರಿಗೆ ಭಾರೀ ಪ್ರಮಾಣ ದಲ್ಲಿ ಮಾದಕವಸ್ತು ತಲುಪುತ್ತಿ ದೆಯೆಂಬ ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ಪುಳಕ್ಕಲ ಎಂಬಲ್ಲಿ ಪೊಲೀಸರು ನಡೆಸಿದ ವಾಹನ ತಪಾಸಣೆ ವೇಳೆ ಮಾದಕವಸ್ತು ವಶಪಡಿಸಲಾಯಿತು. ನಜೀಬ್ ಹಾಗೂ ಜಿನೀಶ್ ಕಾರಿನಲ್ಲಿ ಸಂಚರಿಸುತ್ತಿದ್ದರು. ಸಂಶಯಗೊಂಡು ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಮಾದಕವಸ್ತು ಪತ್ತೆಯಾಗಿದೆ. ವಿದ್ಯಾರ್ಥಿಗಳನ್ನು ಗುರಿಯಿರಿಸಿ ಕಾರ್ಯಾಚರಿಸುವ ಯಾವು ದಾದರೂ ಮಾದಕವಸ್ತು ದಂಧೆಯಲ್ಲಿ ಈ ಇಬ್ಬರು ಸೇರಿಕೊಂಡಿದ್ದಾರೆಯೇ ಎಂದು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.