34ರ ಹರೆಯದ ಗೃಹಿಣಿ 14ರ ಬಾಲಕನೊಂದಿಗೆ ಪರಾರಿ
ಕಾಸರಗೋಡು: ೩೫ರ ಹರೆಯದ ಗೃಹಿಣಿಯೋರ್ವೆ ಮಗನ ಸ್ನೇಹಿತನಾದ 14ರ ಹರೆಯದ ಬಾಲಕನೊಂದಿಗೆ ಪರಾರಿಯಾದ ಘಟನೆ ಪಾಲಕ್ಕಾಡ್ ಬಳಿ ಆಲತ್ತೂರಿನಲ್ಲಿ ನಡೆದಿದೆ. ಕುನ್ನಿಶ್ಶೇರಿ ಕುದಿರಪ್ಪಾರ ನಿವಾಸಿಯಾದ 11ರ ಹರೆಯದ ಮಗನ ಸ್ನೇಹಿತನಾದ 14ರ ಹರೆಯದ ಬಾಲಕನೊಂದಿಗೆ ಗೃಹಿಣಿ ಪರಾರಿಯಾಗಿರುವುದಾಗಿ ಹೇಳಲಾಗುತ್ತಿದೆ. ನಿನ್ನೆ ಶಾಲೆಗೆ ತೆರಳಿದ ಬಾಲಕ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನ ಮನೆಯವರು ಹುಡುಕಾಟ ನಡೆಸಿದರು. ಈ ವೇಳೆ ಬಾಲಕ ಗೃಹಿಣಿಯೊಂದಿಗೆ ಹೋಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಆಲತ್ತೂರು ಪೊಲೀಸರಿಗೆ ಮನೆಯವರು ದೂರು ನೀಡಿದ್ದು, ಇದರಂತೆ ಶೋಧ ನಡೆಸಿದ ಪೊಲೀಸರು ಎರ್ನಾಕುಳಂನಿಂದ ಗೃಹಿಣಿ ಹಾಗೂ ಬಾಲಕನನ್ನು ಪತ್ತೆಹಚ್ಚಿದ್ದಾರೆ. ಬಾಲಕನ ಮನೆಯವರ ದೂರಿನಂತೆ ಬಾಲಕನನ್ನು ಅಪಹರಣಗೈದ ಆರೋಪದಂತೆ ಗೃಹಿಣಿ ವಿರುದ್ಧ ಕೇಸು ದಾಖಲಿಸಲಾಗಿದೆ.
ಇದೇ ವೇಳೆ ಪ್ರಾಯಪೂರ್ತಿಯಾಗದ ಬಾಲಕನನ್ನು ಕರೆದೊಯ್ದ ಹಿನ್ನೆಲೆಯಲ್ಲಿ ಗೃಹಿಣಿ ವಿರುದ್ಧ ಪೋಕ್ಸೋ ಕೇಸು ದಾಖಲಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೃಹಿಣಿ ಪತಿಯೊಂದಿಗೆ ವಿರಸಗೊಂಡು ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆಂದೂ ಪೊಲೀಸರು ತಿಳಿಸಿದ್ದಾರೆ.