ಬೀದಿನಾಯಿ, ವನ್ಯಜೀವಿಗಳ ಉಪಟಳದ ಬೆನ್ನಲ್ಲೇ ಹಾವುಗಳ ಕಾಟ: 5 ಹೆಬ್ಬಾವುಗಳು ಸೆರೆ

ಮೊಗ್ರಾಲ್ : ಬೀದಿನಾಯಿಗಳ ಹಾಗೂ ವನ್ಯಜೀವಿಗಳ ಉಪಟಳ ಎದುರಿಸು ತ್ತಿರುವ ಮೊಗ್ರಾಲ್ ಮತ್ತು ಪೇರಾಲ್ ಪ್ರದೇಶಗಳಲ್ಲಿ ಈಗ ಹೆಬ್ಬಾವುಗಳ ಕಾಟವೂ ತಲೆಯೆತ್ತತೊಡಗಿದೆ. ಇದು ಪ್ರದೇಶದವರನ್ನು ಇನ್ನಷ್ಟು ಭಯಭೀತರನ್ನಾಗಿ ಸತೊಡಗಿದೆ. ಪೇರಾಲ್ ನಿವಾಸಿ ಮೊಹಮ್ಮದ್  ಪೇರಾಲ್ ಎಂಬವರ ಹಿತ್ತಿಲಲ್ಲಿ ಕಾಡು ಬಳ್ಳಿಗಳಿಂದ ಆವೃತ್ತಗೊಂಡಿದ್ದ ಪೊದೆಯಲ್ಲಿ ಐದು ಬೃಹತ್ ಹೆಬ್ಬಾವುಗಳು ಪತ್ತೆಯಾಗಿವೆ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಅರಣ್ಯ ಇಲಾಖೆಯಿಂದ ಹಾವು ಹಿಡಿಯುವ ಬಗ್ಗೆ ನುರಿತ ತರಬೇತಿ ಪಡೆದ ಸರ್ಪ ವಲಂಟಿಯರ್ ಕಾಸರಗೋಡು ಅಡ್ಕತ್ತಬೈಲು ನಿವಾಸಿ ಅಮೀನ್ ಅಡ್ಕತ್ತಬೈಲು ಸ್ಥಳಕ್ಕೆ ಆಗಮಿಸಿ ಅವರ ನೇತೃತ್ವದಲ್ಲಿ ಈ ಐದು ಹೆಬ್ಬಾವುಗಳನ್ನು ಸೆರೆ ಹಿಡಿದು ಅದನ್ನು ನಂತರ ಗೋಣಿಚೀಲಗಳಲ್ಲಿ ತುಂಬಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಮೊಗ್ರಾಲ್ ಮತ್ತು ಪೇರಾಲ್ ಪ್ರದೇಶದ ಹಲವು ಹಿತ್ತಿಲುಗಳು, ಮಾತ್ರವಲ್ಲ ಬಸ್ ತಂಗುದಾಣಗಳು, ರಸ್ತೆಗಳಲ್ಲೂ ಹೆಬ್ಬಾವು ಕಾಣಿಸಿಕೊಳ್ಳುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ.  ಈ ಪ್ರದೇಶದಲ್ಲಿ ಕಾಡುಹಂದಿ ಮತ್ತು ಇತರ ವನ್ಯಜೀವಿಗಳ ಉಪಟಳ ಇನ್ನೊಂದೆಡೆ ಬೇರೆಯೇ ಇದೆ. ಒಟ್ಟಾರೆಯಾಗಿ ಇದೆಲ್ಲವೂ ಈ ಪ್ರದೇಶದ ಜನರಿಗೆ ಭಾರೀ ಬೆದರಿಕೆಯಾಗಿ ತಲೆಯೆತ್ತಿದೆ.

You cannot copy contents of this page