50 ವರ್ಷದಿಂದ ವಾಸಿಸುತ್ತಿರುವ ಭೂಮಿಗೆ ಹಕ್ಕುಪತ್ರ ಮಂಜೂರು ಮಾಡುತ್ತಿಲ್ಲವೆಂದು ಪರಿಶಿಷ್ಟ ಪಂಗಡ ಕುಟುಂಬ ಆರೋಪ
ಕುಂಬಳೆ: 50 ವರ್ಷದಿಂದ ಕುಟುಂಬ ಸಹಿತ ವಾಸಿಸುತ್ತಿರುವ ಭೂಮಿಯ ಹಕ್ಕುಪತ್ರವನ್ನು ಅಧಿಕಾರಿಗಳು ನೀಡುತ್ತಿಲ್ಲವೆಂದು ಪರಿಶಿಷ್ಟ ಪಂಗಡದ ಕುಟುಂಬ ಸುದ್ಧಿಗೋಷ್ಠಿ ನಡೆಸಿ ಆರೋಪಿಸಿದೆ. ಬೇಳ ವಿಲ್ಲೇಜ್ನಲ್ಲಿ ರೀಸರ್ವೆ 19 3/1 ಪಿಟಿಯಲ್ಲಿ ವಾಸಿಸುವ ದಿ| ಕೊರಗ ನಾಯ್ಕ್ರ ಪತ್ನಿ ಅಕ್ಕು ಹೆಂಗ್ಸು (77) ದೂರಿದ್ದಾರೆ. ಈ ಬಗ್ಗೆ ಕುಂಬಳೆ ಸಮಾಜಸೇವಕ ಕೇಶವ ನಾಯ್ಕ್ರ ಸಹಾಯದೊಂದಿಗೆ ತಹಶೀಲ್ದಾರ್ ರಿಂದ ಆರಂಭಿಸಿ ರಾಷ್ಟ್ರಪತಿವರೆಗೂ, ಪರಿಶಿಷ್ಟ ಪಂಗಡ ರಾಷ್ಟ್ರೀಯ ಆಯೋಗದ ಅಧ್ಯಕ್ಷರಿಗೂ ದೂರು ನೀಡಲಾಗಿದೆ. ತಮ್ಮ ಸ್ವಾಧೀನವಿರುವ 2.54 ಎಕ್ರೆ ತಮಗೆ ಮಂಜೂರು ಮಾಡಬೇಕೆಂದು ಕುಟುಂಬ ಆಗ್ರಹಿಸುತ್ತಿರುವುದು. ಇದರಲ್ಲಿ 1.72 ಎಕ್ರೆ ಭೂಮಿ ಈ ಮೊದಲು ಇನ್ನೋರ್ವರಿಗೆ ಮಂಜೂರುಗೊಳಿಸಲಾ ಗಿದ್ದರೂ ಅದನ್ನು ಬಳಿಕ ರದ್ದುಪಡಿಸ ಲಾಗಿತ್ತು ಎಂದು ಹೇಳಲಾಗುತ್ತಿದೆ. 18-03-2008ರ ಸ್ಪೆಷಲ್ ತಹಶೀಲ್ದಾರ್ (ಎಲ್ಎ), ಎಲ್ 6-291/2006ರ ಕ್ರಮ ಪ್ರಕಾರವಾಗಿತ್ತು ಇದು. ಪ್ರತಿಸ್ಪರ್ಧಿ ನ್ಯಾಯಾಲಯದ ಮೆಟ್ಟಿಲೇರಿದಾಗ ಆ ಮಂಜೂರಾತಿ ಯನ್ನು ರದ್ದುಪಡಿಸಲಾಯಿತು. ಅರ್ಹವಾದ ಭೂಮಿಗೆ ಹಕ್ಕು ಪತ್ರ ಲಭಿಸಲು ಕಂದಾಯ ಕಚೇರಿಗಳ ಮೆಟ್ಟಿಲು ಹತ್ತಿ ಇಳಿಯುತ್ತಿರುವುದಾಗಿ ಶ್ರೀಧರ ನಾಯ್ಕ್ ದೂರಿದ್ದಾರೆ. 1.20 ಎಕ್ರೆ ಮಂಜೂರುಗೊಳಿಸಬಹುದೆAದೂ, ಉಳಿದ ಭೂಮಿಗಾಗಿರುವ ನಿಮ್ಮ ಯತ್ನವನ್ನು ಕೈ ಬಿಡಬೇಕೆಂದೂ ಇಲ್ಲದಿದ್ದರೆ ಮುಂದೆ ಗಂಡಾAತರ ಎದುರಿಸಬೇಕಾಗಿ ಬರಬಹುದೆಂದು ಕಂದಾಯ ತಂಡ ಬೆದರಿ ಸುತ್ತಿರುವುದಾಗಿಯೂ ಅವರು ಹೇಳುತ್ತಿದ್ದಾರೆ. ಕೆಲವು ಕಂದಾಯ ಅಧಿಕಾರಿಗಳ ಆರ್ಥಿಕ ಆಸಕ್ತಿಗಳು ಭೂಮಿ ಮಂಜೂರುಗೊಳಿಸದಿರುವ ಹಿಂದಿದೆ ಎಂದು ಕುಟುಂಬ ಆರೋ ಪಿಸುತ್ತಿದೆ. ಶಾಸಕ, ಸಂಸದ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸ ಬೇಕೆಂದು, ಉಳಿದ ಸ್ಥಳದ ವಿಷಯ ದಲ್ಲಿ ತೀರ್ಮಾನ ಮಾಡಬೇಕೆಂದು ಕುಟುಂಬ ಆಗ್ರಹಿಸಿದೆ. ಸುದ್ಧಿಗೋಷ್ಠಿಯಲ್ಲಿ ಅಕ್ಕು ಹೆಂಗ್ಸು, ಕೇಶವ ನಾಯ್ಕ್, ಶ್ರೀಧರ ನಾಯ್ಕ್, ವಿಜಯಲಕ್ಷ್ಮಿ ಭಾಗವಹಿಸಿದರು.