50 ಲಕ್ಷ ರೂ. ಕಳವು: ಆರೋಪಿಗಳು ತಮಿಳುನಾಡು ನಿವಾಸಿಗಳೆಂದು ಸೂಚನೆ
ಕುಂಬಳೆ: ಉಪ್ಪಳದಲ್ಲಿರುವ ಖಾಸಗಿ ಎಟಿಎಂಗೆ ಹಣ ತುಂಬಿಸಲು ತಲುಪಿದ್ದ ವಾಹನದ ಗಾಜು ಪುಡಿಗೈದು 50 ಲಕ್ಷ ರೂಪಾಯಿಗಳನ್ನು ಕಳವುಗೈದ ಪ್ರಕ ಣದಲ್ಲಿ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಯುತ್ತಿದೆ. ಕಾಸರಗೋಡು ಡಿವೈಎಸ್ಪಿ ಹಾಗೂ ಮಂಜೇಶ್ವರ ಇನ್ ಸ್ಪೆಕ್ಟರ್ ರಾಜೀವ್ ಕುಮಾರ್ ನೇತೃತ್ವ ದಲ್ಲಿ ಪ್ರತ್ಯೇಕ ಸ್ಕ್ವಾಡ್ ರೂಪೀಕರಿಸಿ ತನಿಖೆ ಮುಂದುವರಿಸಲಾಗಿದೆ. ಇದೇ ವೇಳೆ ಕಳ್ಳರ ತಂಡದಲ್ಲಿ ಮೂರು ಮಂದಿ ಇದ್ದರೆಂದು ಬಹುತೇಕ ಖಚಿತಗೊಂ ಡಿದೆ. ಆರೋಪಿಗಳು ತಮಿಳುನಾಡಿನ ತಿರುಚನಾಪಳ್ಳಿ ನಿವಾಸಿಗಳೆಂದು ತಿಳಿದುಬಂದಿದೆ. ಉಪ್ಪಳದಲ್ಲಿ ಹಣ ಕಳವುಗೈದ ಬಳಿಕ ಈ ತಂಡ ಕರ್ನಾಟಕ ಅಥವಾ ತಮಿಳುನಾಡಿಗೆ ಪರಾರಿಯಾಗಿ ರಬಹು ದೆಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಎರಡು ರಾಜ್ಯಗಳಿಗೆ ತನಿಖೆಯನ್ನು ವಿಸ್ತರಿಸಲಾಗಿದೆ. ಈ ತಂಡ ಕರ್ನಾಟಕದಲ್ಲಿ ಕಾರೊಂದರ ಗಾಜು ಪುಡಿಗೈದು ಲ್ಯಾಪ್ ಟೋಪ್ ಕಳವು ನಡೆಸಿದ ಬಳಿಕ ಉಪ್ಪಳಕ್ಕೆ ತಲುಪಿತ್ತೆಂದು ತಿಳಿದುಬಂದಿದೆ.
ಮೊನ್ನೆ ಮಧ್ಯಾಹ್ನ ಉಪ್ಪಳ ಪೇಟೆಯಲ್ಲಿರುವ ಎಟಿಎಂಗೆ ಹಣ ತುಂಬಿಸಲು ತಲುಪಿದ್ದ ವಾಹನದ ಗಾಜು ಪುಡಿಗೈದು ಅದರಲ್ಲಿದ್ದ ೫೦ ಲಕ್ಷ ರೂಪಾಯಿಗಳನ್ನು ಕಳ್ಳರು ದೋಚಿದ್ದಾರೆ. ವಾಹನದ ಚಾಲಕ ಹಾಗೂ ಇನ್ನೋರ್ವ ಎಟಿಎಂ ಕೌಂಟರ್ಗೆ ತೆರಳಿದ್ದ ವೇಳೆ ಈ ಕೃತ್ಯ ನಡೆಸಲಾಗಿದೆ. ಇದೇ ವೇಳೆ ಹಣ ಕಳವುಗೈದು ಪರಾರಿಯಾದ ಓರ್ವಕಳ್ಳನ ಇನ್ನೊಂದು ದೃಶ್ಯ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ.