500 ರೂ.ಗಳ ಕಳ್ಳನೋಟು ಸಹಿತ ಓರ್ವ ವಶಕ್ಕೆ
ಕಾಸರಗೋಡು: ಕಾಸರಗೋ ಡಿನಲ್ಲಿ ವ್ಯಾಪಕವಾಗಿ ಕಳ್ಳನೋಟು ವ್ಯವಹಾರ ನಡೆಯುತ್ತಿದೆಯೆಂಬ ವರದಿಯ ಬೆನ್ನಲ್ಲೇ 500 ರೂಪಾಯಿ ಗಳ ನಾಲ್ಕು ಕಳ್ಳನೋಟುಗಳು ಸಹಿತ ಯುವಕನೋರ್ವನನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆ.
ಪಾಲಕುನ್ನು ಆರಾಟುಕಡವು ಎರೋಲ್ ನಿವಾಸಿಯಾದ ವಿನೋ ದ್ ಎಂಬಾತ ಪೊಲೀಸರ ವಶದಲ್ಲಿದ್ದು, ಆತನನ್ನು ತೀವ್ರ ತನಿಖೆಗೊಳಪ ಡಿಸಲಾಗುತ್ತಿದೆ. ನಿನ್ನೆ ಸಂಜೆ ಪಾಲಕುನ್ನುವಿನ ಮೊಬೈಲ್ ಅಂಗಡಿಯೊಂದಕ್ಕೆ ತೆರಳಿದ ವಿನೋದ್ ಮೊಬೈಲ್‌ನ ಡಿಸ್‌ಪ್ಲೇ ದುರಸ್ತಿ ನಡೆಸಿದ ಬಳಿಕ ೫೦೦ ರೂಪಾಯಿಗಳ ನೋಟುಗಳನ್ನು ನೀಡಿದ್ದನೆನ್ನಲಾಗಿದೆ. ನೋಟುಗಳ ಮೇಲೆ ಸಂಶಯಗೊಂಡು ತಪಾಸಣೆ ನಡೆಸಿದಾಗ ಅವು ಕಳ್ಳನೋಟುಗಳಾಗಿವೆಯೆಂದು ತಿಳಿದುಬಂದಿದೆ. ಮೊದಲ ನೋಟದಲ್ಲಿ ಅಸಲಿ ನೋಟುಗಳಂತೆ ಇವು ಕಾಣುತ್ತಿವೆ. ಈ ನೋಟುಗಳು ಬ್ಯಾಂಕ್‌ನಿಂದ ಲಭಿಸಿರುವುದಾಗಿ ವಿನೋದ್ ಪೊಲೀಸರಲ್ಲಿ ತಿಳಿಸಿದ್ದಾನ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆಯೆಂದು ಬೇಕಲ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಉದುಮ ಹಾಗೂ ಪರಿಸರ ಪ್ರದೇಶಗಳಲ್ಲಿ ಕಳ್ಳನೋಟುಗಳು ವ್ಯಾಪಕಗೊಂಡಿರುವುದಾಗಿ ಪೊಲೀಸರು ಪತ್ತೆಹಚ್ಚಿದ್ದರು.