543 ಲೋಕಸಭಾ ಸಂಸದರಲ್ಲಿ 251 ಮಂದಿ ವಿರುದ್ಧ ಕ್ರಿಮಿನಲ್ ಕೇಸು: ಸುಪ್ರೀಂಕೋರ್ಟ್ ದತ್ತಾಂಶದಲ್ಲಿ ಬಹಿರಂಗ

ನವದೆಹಲಿ: ಒಟ್ಟು 543 ಲೋಕ ಸಭಾ ಸಂಸದರಲ್ಲಿ 251 ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿ ವೆಯೆಂದು ಸುಪ್ರೀಂಕೋರ್ಟ್ಗೆ ಸಲ್ಲಿಸಲಾದ ದತ್ತಾಂಶ ಬಹಿರಂಗಪಡಿಸಿದೆ.
ಹೀಗೆ ಕ್ರಿಮಿನಲ್ ಪ್ರಕರಣಗಳು ದಾಖಲುಗೊಂಡಿರುವ ಸಂಸದರ ಪೈಕಿ 170 ಮಂದಿ ವಿರುದ್ಧ ದಾಖಲಾಗಿರುವ ಪ್ರಕರಣಗಳು ಕನಿಷ್ಠ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾಗಬಹುದಾದ ಅಪರಾಧ ಪ್ರಕರಣಗಳಾಗಿವೆ.
ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲ ವಿಜಯ್ ಹನ್ಸಾರಿಯ ಅವರು ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಮನ್ಮೋಹನ್ರನ್ನೊಳಗೊಂಡ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠಕ್ಕೆ ಸಲ್ಲಿಸಿದ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ. ಇದರಂತೆ ಕೇರಳದ 20 ಸಂಸದರಲ್ಲಿ 11 ಮಂದಿ ಗಂಭೀರ ಪ್ರಕರಣಗಳನ್ನು ಹೊಂದಿದ್ದಾರೆAದು ವರದಿ ಹೇಳಿದೆ. ತೆಲಂಗಾಣದಲ್ಲಿ 17ರಲ್ಲಿ 14, ಒಡಿಸ್ಸಾ 21ರಲ್ಲಿ 16, ಝಾರ್ಖಂಡ್ 14ರಲ್ಲಿ10, ತಮಿಳು ನಾಡು 39ರಲ್ಲಿ 26 ಮಂದಿ ಸಂಸದರು ಕ್ರಿಮಿನಲ್ ಆರೋಪಗಳನ್ನು ಎದುರಿ ಸುತ್ತಿದ್ದಾರೆ. ಉಳಿದಂತೆ ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಲ, ಬಿಹಾರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದಂತಹ ಇತರ ಪ್ರಮುಖ ರಾಜ್ಯಗಳ ಸಂಸದರ ಪೈಕಿ ಶೇ. 50ರಷ್ಟು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹರಿಯಾಣದ 10 ಸಂಸದರು ಮತ್ತು ಛತ್ತೀಸ್ಗಡದ 11 ಸಂಸದರ ಪೈಕಿ ತಲಾ ಓರ್ವರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಪಂಜಾಬ್ನ 13ರಲ್ಲಿ 2, ಅಸ್ಸಾಂನ 14ರಲ್ಲಿ 3, ದೆಹಲಿಯ 7ರಲ್ಲಿ 3, ರಾಜಸ್ಥಾನದ 25ರಲ್ಲಿ 4, ಗುಜರಾತ್ನ 25ರಲ್ಲಿ 5 ಮತ್ತು ಮಧ್ಯಪ್ರದೇಶದ 29 ಸಂಸದರಲ್ಲಿ 9 ಸಂಸದರೂ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ. ಇದು ಮಾತ್ರವಲ್ಲದೆ ಜನವರಿ 1ರ ವೇಳೆಗೆ ದೇಶದ ವಿವಿಧ ರಾಜ್ಯಗಳ ಹಾಲಿ ಅಥವಾ ಮಾಜಿ ಶಾಸಕರು ಆರೋಪಿಗಳಾಗಿದ್ದಾರೆ. 4,732 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆಯೆಂದು ವರದಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಉತ್ತರಪ್ರದೇಶ 1,171 ಪ್ರಕರಣಗಳೊಂದಿಗೆ ಅಗ್ರಸ್ಥಾನ ದಲ್ಲಿದೆ. ಉಳಿದಂತೆ ಕೇರಳದಲ್ಲಿ 315, ಒಡಿಶಾ 457, ಬಿಹಾರ 448, ಮಹಾ ರಾಷ್ಟ್ರ 442, ಮಧ್ಯಪ್ರದೇಶ 326, ತೆಲಂಗಾಣ 313, ಕರ್ನಾಟಕ 255, ತಮಿಳುನಾಡು 220, ಝಾರ್ಖಂಡ್ 133 ಮತ್ತು ದೆಹಲಿಯ 124 ಪ್ರಕರಣಗಳು ಬಾಕಿ ಉಳಿದುಕೊಂಡಿವೆ ಯೆಂದು ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page