ಕಾಸರಗೋಡು: ೫೮ರ ಹರೆಯದ ಮಹಿಳೆ ಮೇಲೆ ಹಲವಾರು ಬಾರಿ ಅತ್ಯಾಚಾರ ನಡೆಸಿದ ಆರೋಪದಂತೆ ಪೊಲೀ ಸರು ಕೇಸು ದಾಖಲಿಸಿಕೊಂ ಡಿದ್ದಾರೆ. ದೂರುದಾತೆಯ ತಂಗಿಯ ಪತಿ ವಿರುದ್ಧ ಕೇಸು ದಾಖಲಿಸಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಮಹಿಳೆ ದೂರು ನೀಡಿದ್ದಾಳೆ. 2022 ಎಪ್ರಿಲ್ 15ರಿಂದ 2023 ಅಕ್ಟೋಬರ್ವರೆಗೆ ಹಲವು ಬಾರಿ ಕಿರುಕುಳ ನೀಡಿರುವುದಾಗಿ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಭಯದಿಂದ ಘಟನೆ ಕುರಿತು ಇದುವರೆಗೆ ಯಾರಲ್ಲೂ ತಿಳಿಸಿರ ಲಿಲ್ಲವೆನ್ನಲಾಗಿದೆ. ಆರೋಪಿ ಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
