60 ಕೋಟಿ ರೂ.ಗಳ ತೆರಿಗೆ ವಂಚನೆ: ಫಿಲ್ಮ್ ಸಿಟಿಗೆ ಆದಾಯ ತೆರಿಗೆ ದಾಳಿ
ಕೊಚ್ಚಿ: ಕೊಚ್ಚಿಯನ್ನು ಕೇಂದ್ರ ವನ್ನಾಗಿ ಕಾರ್ಯಾಚರಿಸುತ್ತಿರುವ ಪರವ ಫಿಲ್ಮ್ ಇನ್‌ಸ್ಟಿಟ್ಯೂಟ್ 60 ಕೋಟಿ ರೂ.ಗಳ ಆದಾಯ ತೆರಿಗೆ ವಂಚನೆ ನಡೆಸಿರುವುದಾಗಿ ಪತ್ತೆಹಚ್ಚ ಲಾಗಿದ್ದು, ಅದರಂತೆ ಆ ಕೇಂದ್ರಕ್ಕೆ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲಿಸುತ್ತಿದೆ.
ಇತ್ತೀಚೆಗಷ್ಟೇ ಬಿಡುಗಡೆಗೊಂಡ ಮಂಞುಮ್ಮಲ್ ಬಾಯ್ಸ್ ಮಲೆಯಾಳಂ ಸಿನಿಮಾ 140 ಕೋಟಿ ರೂ.ಗಿಂತಲೂ ಹೆಚ್ಚು ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಅದರಲ್ಲಿ ೬೦ ಕೋಟಿ ರೂ.ಗಳ ಆದಾಯ ವಂಚನೆ ನಡೆಸಿರುವುದಾಗಿ ಆದಾಯ ತೆರಿಗೆ ಇಲಾಖೆ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಆ ಚಿತ್ರದಲ್ಲಿ ನಟಿಸಿದ ಖ್ಯಾತ ನಟ ನೌಬಿನ್ ಸಾಹೀರ್‌ಗೂ ಆದಾಯ ತೆರಿಗೆ ನೋಟೀಸು ಜ್ಯಾರಿಗೊಳಿಸಿದೆ ಮಾತ್ರವಲ್ಲದೆ ತಮ್ಮ ಕಚೇರಿಯಲ್ಲಿ ಹಾಜರಾಗಿ ಹೇಳಿಕೆ ನೀಡುವಂತೆ ನಿರ್ದೇಶ ನೀಡಿದೆ.
೧೪೦ ಕೋಟಿ ರೂ. ಈ ಸಿನಿಮಾ ಗಳಿಸಿದ್ದರೂ ಅದರಲ್ಲಿ ೬೦ ಕೋಟಿ ರೂ. ಆದಾಯವನ್ನು ಮರೆಮಾಚಲಾಗಿದೆ ಯೆಂದು ಆದಾಯ ತೆರಿಗೆ ಇಲಾಖೆ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಆ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಆ ಚಿತ್ರ ನಿರ್ಮಾಪಕ ಸಂಸ್ಥೆ ಪರವಂ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಆದಾಯ ತೆರಿಗೆ ದಾಳಿ ನಡೆಸಿದೆ. ಮಾತ್ರವಲ್ಲ ಅದಕ್ಕೆ ಸಂಬಂಧಿಸಿ ಇತರ 7 ಕೇಂದ್ರಗಳಲ್ಲೂ ಆದಾಯ ತೆರಿಗೆ ಸಮಾನ ರೀತಿಯ ದಾಳಿ ಆರಂಭಿಸಿದೆ. ಈ ಸಿನಿಮಾದ ನಿರ್ಮಾಪಕರಲ್ಲಿ ಓರ್ವರಾದ ಪರವ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಸಂಬಂಧಪಟ್ಟವರು ಸಿನಿಮಾಕ್ಕೆ ಹೂಡಿದ ಬಂಡವಾಳ ಮತ್ತು ಲಾಭದ ಕುರಿತಾದ ಯಾವುದೇ ಮಾಹಿತಿ ಯನ್ನು ನೀಡದೆ ಬಚ್ಚಿಟ್ಟಿದ್ದರೆಂದೂ ಆ ಮೂಲಕ ಗಂಭೀರ ಆರ್ಥಿಕ ವಂಚನೆ ನಡೆಸಿದ್ದಾರೆಂಬ ಆರೋಪ ಈ ಹಿಂದೆ ಉಂಟಾಗಿತ್ತು. ಆ ಬಗ್ಗೆ ಪೊಲೀಸರು ತನಿಖೆ ನಡೆಸಿ ಕೇರಳ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು.ಅದರ ಆಧಾರದಲ್ಲಿ ಆದಾಯ ತೆರಿಗೆ ಈ ದಾಳಿ ನಡೆಸಿದೆ.