60 ಸಾವಿರದತ್ತ ನೆಗೆದ ಚಿನ್ನದ ದರ
ಕಾಸರಗೋಡು: ರಾಜ್ಯದ ಚಿನ್ನದ ಬೆಲೆ 60 ಸಾವಿರದತ್ತ ನೆಗೆದಿದೆ. ನಿನ್ನೆಗಿಂತ ಇಂದು ಒಂದು ಪವನ್ಗೆ 400 ರೂ.ಗಳ ಹೆಚ್ಚಳವಾಗಿದೆ. ಈ ಮೂಲಕ ಒಂದು ಪವನ್ ಚಿನ್ನದ ದರ 59,120 ರೂ.ಗೆ ತಲುಪಿದೆ. 1 ಗ್ರಾಂ ಚಿನ್ನದ ದರ 7390 ರೂ. ಆಗಿದೆ. ಹಲವು ದಿನಗಳಿಂದ ಚಿನ್ನದ ದರದಲ್ಲಿ ಏರಿಕೆಯಾ ಗುತ್ತಲೇ ಸಾಗಿದ್ದು, ಇದೇ ರೀತಿ ಮುಂದುವರಿದರೆ 60 ಸಾವಿರಕ್ಕೆ ತಲುಪಿ ಮತ್ತೊಮ್ಮೆ ದಾಖಲೆ ನಿರ್ಮಿಸುವ ಸಾಧ್ಯತೆ ಇದೆ. ಇದೇ ವೇಳೆ ಚಿನ್ನದ ದರ ಏರಿಕೆಯಾಗಿರುವುದು ಗ್ರಾಹಕರಿಗೆ ಆತಂಕ ಮೂಡಿಸಿದೆ.