60,000 ಕುಟುಂಬಗಳಿಗೆ ಆದ್ಯತಾ ರೇಶನ್ ಕಾರ್ಡ್ ನೀಡಲಾಗುವುದು-ಸಚಿವ ಜಿ.ಆರ್. ಅನಿಲ್
ಮುಳ್ಳೇರಿಯ: ರಾಜ್ಯದಲ್ಲಿ 60,000ದಷ್ಟು ಕುಟುಂಬಗಳಿಗೆ ಹೊಸದಾಗಿ ಆದ್ಯತಾ ರೇಶನ್ ಕಾರ್ಡ್‌ಗಳನ್ನು ನೀಡಲಾಗುವುದೆಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ.
ಮುಳ್ಳೇರಿಯದ ಮಾವೇಲಿ ಸ್ಟೋರ್‌ನ್ನು ಸಪ್ಲೈಕೋ ಸೂಪರ್ ಮಾರ್ಕೆಟ್ ಆಗಿ ಭಡ್ತಿಗೊಳಿಸಿದುದರ ಉದ್ಘಾಟನೆಯನ್ನು ನಿನ್ನೆ ನೆರವೇರಿಸಿ ಸಚಿವರು ಮಾತನಾಡುತ್ತಿದ್ದರು.
ಅನರ್ಹವಾಗಿ ಆದ್ಯತಾ ರೇಶನ್ ಕಾರ್ಡ್‌ಗಳನ್ನು ಪಡೆದಿರುವವರನ್ನು ಗುರುತಿಸಿ, ಅದನ್ನು ರದ್ದುಪಡಿಸಿ, ಅವು ಗಳನ್ನು ಅರ್ಹವಾದ ಕುಟುಂಬಗಳಿಗೆ ನೀಡುವ ಕ್ರಮ ಈಗ ಕೈಗೊಳ್ಳಲಾಗುತ್ತಿದೆ.
ಕ್ರಿಸ್ಮಸ್ ಮತ್ತು ಹೊಸ ವರ್ಷದ ಅಂಗವಾಗಿ ಶನಿವಾರ ಸಂತೆಗಳನ್ನು ಆರಂಭಿಸಲಾಗುವುದು. ಇವುಗಳಲ್ಲಿ ಅವಶ್ಯಕ ಸಾಮಗ್ರಿಗಳನ್ನು ಮಿತದರದಲ್ಲಿ ವಿತರಿಸಲಾಗುವುದು. ರಾಜ್ಯದ ಒಟ್ಟು ರೇಶನ್ ಕಾರ್ಡ್‌ಗಳಲ್ಲಿ ಶೇ. 57ರಷ್ಟು ಬಿಳಿ ಮತ್ತು ನೀಲಿ ಬಣ್ಣದ ರೇಶನ್ ಕಾರ್ಡ್‌ಗಳನ್ನು ಹೊಂದಿದ ಕುಟುಂಬ ದವರಾಗಿದ್ದಾರೆ. ಬಾಕಿ ಉಳಿದ ಶೇ. ೪೭ರಷ್ಟು ಹಳದಿ ಮತ್ತು ಪಿಂಕ್ ಕಾರ್ಡ್‌ಗಳು ಹೊಂದಿರುವ ಕುಟುಂಬಗಳಾಗಿವೆ.
ರಾಜ್ಯದಲ್ಲಿ ಪ್ರತೀ ತಿಂಗಳು 83 ಲಕ್ಷ ಕುಟುಂಬಗಳು ರೇಶನ್ ಸಾಮಗ್ರಿಗಳನ್ನು ಪಡೆಯುತ್ತಿವೆ. ಕೇರಳ ಒಂದು ಫಲಾನುಭವಿ ರಾಜ್ಯವಾಗಿದ್ದರೂ ಮಿತವಾದ ಬೆಲೆಗೆ ಜನರಿಗೆ ಅಗತ್ಯದ ಅವಶ್ಯಕ ಸಾಮಗ್ರಿಗಳನ್ನು ವಿತರಿಸಲು ಸಾಧ್ಯವಾಗುತ್ತಿದೆ. ಆದರೆ ಇತರ ರಾಜ್ಯಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ತೆರೆದ ಮಾರುಕಟ್ಟೆಯಲ್ಲಿ 20 ರೂ. ಬೆಲೆ ಹೊಂದಿರುವ ಕುಡಿಯುವ ಬಾಟಲಿ ನೀರನ್ನು ಸಪ್ಲೈಕೋ ಮತ್ತು ರೇಶನ್ ಅಂಗಡಿಗಳಲ್ಲಿ ೧೦ ರೂ.ಗೆ ವಿತರಿಸಲಾಗು ತ್ತಿದೆಯೆಂದೂ ಸಚಿವರು ತಿಳಿಸಿದ್ದಾರೆ.
ಶಾಸಕ ಎನ್.ಎ. ನೆಲ್ಲಿಕುನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮೊದಲ ಮಾರಾಟ ಕ್ರಮ ನೆರವೇರಿಸಿದರು.