7 ತಿಂಗಳ ಗರ್ಭಿಣಿಯನ್ನು ಕೊಲೆಗೈದ ಪ್ರಿಯತಮ
ದೆಹಲಿ: ವಿವಾಹವಾಗಬೇಕೆಂದು ಪ್ರಿಯತಮನೊಂದಿಗೆ ಹಠ ಹಿಡಿದ 7 ತಿಂಗಳ ಗರ್ಭಿಣಿಯಾದ ಪ್ರಿಯತಮೆ ಯನ್ನು ಗೆಳೆಯರ ಜೊತೆ ಸೇರಿ ಕೊಂದು ಹೂತು ಹಾಕಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿ ನಾನ್‌ಗ್ಲೋಯಿ ನಿವಾಸಿಯಾದ ಸೋನಿಯಾ (19) ಕೊಲೆಗೀಡಾದ ಯುವತಿ. ಪ್ರಕರಣದಲ್ಲಿ ಪ್ರಿಯತಮ ಸಂಜು ಯಾನೇ ಸಲೀಮ್ ಹಾಗೂ ಗೆಳೆಯ ಸೆರೆಯಾಗಿದ್ದಾನೆ. ಈತನ ಇನ್ನೋರ್ವ ಗೆಳೆಯನಿಗಾಗಿ ಪೊಲೀ ಸರು ಹುಡುಕಾಟ ಆರಂಭಿಸಿದ್ದಾರೆ.