7 ನಾಗರಿಕರನ್ನು ಕೊಂದ ಮಾಸ್ಟರ್ ಮೈಂಡ್ ಲಷ್ಕರ್ ಉಗ್ರನ ಹತ್ಯೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಚಿಗಾಮ್ ಪ್ರದೇಶದಲ್ಲಿ ನಿನ್ನೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಎ ತೊಬಾ ಭಯೋತ್ಪಾದಕ ಸಂಘಟನೆಯ ಸ್ಥಳೀಯ ಕಮಾಂಡರ್ ಜುನೈದ್ ಅಹಮ್ಮದ್ ಭಟ್‌ನನ್ನು ಭಾರತೀಯ ಸೇನಾಪಡೆ ಹೊಡೆದುರು ಳಿಸಿದೆ. ಗಂಡಾರ್ಬಲ್ ಸುರಂಗ ನಿರ್ಮಾಣ ಸ್ಥಳದಲ್ಲಿ ಅಕ್ಟೋಬರ್ ೨೦ರಂದು ಓರ್ವ ವೈದ್ಯ ಹಾಗೂ ಆರು ಮಂದಿ ಕಾರ್ಮಿಕರನ್ನು ಗುಂಡಿಕ್ಕಿ ಕೊಲೆಗೈದ ಭಯೋತ್ಪಾದಕ ನಾಗಿದ್ದಾನೆ ಜುನೈದ್ ಅಹಮ್ಮದ್ ಭಟ್ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.