70 ವರ್ಷದ ಮೇಲ್ಪಟ್ಟವರಿಗೆ ಆಯುಷ್ಮಾನ್ ಆರೋಗ್ಯ ವಿಮೆ: ಭಾರತೀಯ ಪೆನ್ಶನರ್ಸ್ ಮಹಾಸಂಘ ಸ್ವಾಗತ
ಕಾಸರಗೋಡು: ಆದಾಯಮಿತಿ ಇಲ್ಲದೆ ದೇಶದ 70 ವರ್ಷಕ್ಕಿಂತ ಮೇಲಿನ ಎಲ್ಲರಿಗೂ 5 ಲಕ್ಷ ರೂ. ಮೌಲ್ಯದ ಆಯುಷ್ಮಾನ್ ವಿಮಾ ಯೋಜನೆಯನ್ನು ಜ್ಯಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ತೀರ್ಮಾನವನ್ನು ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘ ಸ್ವಾಗತಿಸಿದೆ. ದೇಶದ ಎಲ್ಲಾ ವರ್ಗದ ಜನರಿಗೆ ಪ್ರಯೋಜನ ಸಿಗುವ ಈ ಯೋಜನೆ ಭಾರತದ ಇತಿಹಾಸದಲ್ಲೇ ಪ್ರಥಮವಾಗಿದೆ ಎಂದು ಸಂಘ ಶ್ಲಾಘಿಸಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಂ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಅಧ್ಯಕ್ಷ ಸಿ.ಎಚ್. ಸುರೇಶ್, ಕೋಶಾಧಿಕಾರಿ ಕೆ. ದಯಾನಂದ, ಸದಸ್ಯರಾದ ಬಾಲಚಂದ್ರ, ರವೀಂದ್ರನ್ ನಾಯರ್, ಮಾಧವನ್ ನಾಯರ್, ಚಂದ್ರು, ಸತೀಶ, ಕಾರ್ಯದರ್ಶಿ ಸಿ.ಎಚ್. ಜಯೇಂದ್ರ ಮಾತನಾಡಿದರು.