74.8 ಗ್ರಾಂ ಎಂಡಿಎಂಎ ಸಹಿತ ಇಬ್ಬರ ಸೆರೆ

ಉಪ್ಪಳ: ಮಾದಕವಸ್ತುವಾದ ಎಂಡಿಎಂಎ ಸಾಗಿಸುತ್ತಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಮೀಯಪದವು ಬೇರಿಕೆ ನಿವಾಸಿಗಳಾದ ಸಯ್ಯಿದ್ ಅಫ್ರೀಝ್ (25), ಮುಹಮ್ಮದ್ ಝಮೀರ್ ಎಸ್.ಕೆ (24) ಎಂಬಿವರನ್ನು ಮಂಜೇಶ್ವರ ಎಸ್.ಐ ರತೀಶ್ ನೇತೃತ್ವದ ಪೊಲೀಸರು  ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಬಂಧಿತರ ಕೈಯಲ್ಲಿದ್ದ 74.8 ಗ್ರಾಂ ಎಂಡಿಎಂಎಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 7.10 ರ ವೇಳೆ ಮೀಂಜ ಪಂಚಾಯತ್‌ನ ಕೊಳಬೈಲಿನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಆಗಮಿಸಿದ ಸ್ಕೂಟರ್ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಎಸ್‌ಐಯೊಂದಿಗೆ ಎಎಸ್‌ಐ ಸದನ್, ಪೊಲೀಸರಾದ ರಜೀಶ್ ಕಾಟಾಂಬಳ್ಳಿ, ನಿಜಿನ್ ಕುಮಾರ್ ಮೊದಲಾದವರಿದ್ದರು.

You cannot copy contents of this page