8ನೇ ತರಗತಿ ವಿದ್ಯಾರ್ಥಿ ನೇಣುಬಿಗಿದು ಸಾವು
ಹೊಸದುರ್ಗ: 8ನೇ ತರಗತಿ ವಿದ್ಯಾರ್ಥಿ ಮನೆಯಕೊಠಡಿಯೊ ಳಗೆ ಕಿಟಿಕಿ ಸರಳಿಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾನೆ. ಪಿಲಾತ್ತರ ಪೆರಿಯಾಟ್ಟ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಪುದಿಯತೆರು ನಿವಾಸಿ ವಿಜಿನಾ-ರಾಜೇಶ್ ದಂಪತಿಯ ಪುತ್ರ ಅಜುಲ್‌ರಾಜ್ (13) ಮೃತಪಟ್ಟ ಬಾಲಕ. ನಿನ್ನೆ ಮಧ್ಯಾಹ್ನ ಊಟದ ಬಳಿಕ ತಾಯಿ ಹಾಗೂ ಸಹೋದರಿ ನಿದ್ರಿಸಿದ್ದರು. ಸಂಜೆ 5.15ಕ್ಕೆ ಇವರು ಎದ್ದು ನೋಡಿ ದಾಗ ಅಜುಲ್‌ರಾಜ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈತ ಪಿಲಾತ್ತರ ಮೇರಿ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಪರೀಕ್ಷೆಯಲ್ಲಿ ಅಂಕ ಕಡಿಮೆಯಾದು ದರಿಂದ ಶಾಲೆಯಲ್ಲಿ ಅಧ್ಯಾಪಿಕೆ ಗದರಿ ಸುವ ರೆಂಬ ಹೆದರಿಕೆ ಬಾಲಕನಿಗಿದ್ದುದಾಗಿ ಸಂಬಂಧಿಕರು ತಿಳಿಸುತ್ತಿದ್ದಾರೆ.