8 ತಿಂಗಳ ಗರ್ಭಿಣಿ ಮೃತದೇಹ ಪತಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕೋಟಯಂ: 8 ತಿಂಗಳ ಗರ್ಭಿಣಿ ಯುವತಿ ಪತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೋಟಯಂ ಮಾಞೂರ್ ಕಂಡಾಟುಪಾಡಂ ಮುದುಕ್ಕಾಡ್ ನಿವಾಸಿ ಅಖಿಲ್ ಮ್ಯಾನ್ವಲ್‌ರ ಪತ್ನಿ ಅಮಿತ ಸನ್ನಿ (32) ಮೃತ ಪತ್ತ ಗರ್ಭಿಣಿ. ಮನೆಯ ಮೇಲಿನ ಮಹಡಿಯ ಮಲಗುವ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅಮಿತ ಕಂಡು ಬಂದಿದ್ದಾರೆ. ಈ ವೇಳೆ ಪತಿ ಅಖಿಲ್ ಮನೆಯಲ್ಲಿ ರಲಿಲ್ಲವೆನ್ನಲಾಗಿದೆ. ಸಾಯುವುದಕ್ಕಿಂತ ಮುಂಚಿತ ತವರು ಮನೆಯಲ್ಲಿರುವ ತಾಯಿಯನ್ನು ಫೋನ್‌ನಲ್ಲಿ ಕರೆದು ತಾನಿನ್ನು ನೇಣು ಬಿಗಿದು ಆತ್ಮಹತ್ಯೆಗೈಯ್ಯುತ್ತಿರುವುದಾಗಿ ಮಕ್ಕಳನ್ನು ಸಂರಕ್ಷಿಸಬೇಕೆಂದು ತಿಳಿಸಿದ್ದಾರೆನ್ನಲಾಗಿದೆ. ಬಳಿಕ ತಾಯಿ ಎಲ್ಸಮ್ಮ ಅಖಿಲ್‌ನನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಅವರು ಮನೆಗೆ ತಲುಪಿದಾಗ ಕೊಠಡಿ ಮುಚ್ಚಿದ ಸ್ಥಿತಿಯಲ್ಲಿದ್ದು, ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಾರೆ. ಪೊಲೀಸರು ತಲುಪಿ ಮನೆಗೆ ಬೀಗ ಜಡಿದಿದ್ದು, ಕೇಸು ದಾಖಲಿಸಿದ್ದಾರೆ.
ನಾಲ್ಕು ವರ್ಷದ ಹಿಂದೆ ಅಖಿಲ್ ಹಾಗೂ ಅಮಿತರ ವಿವಾಹ ನಡೆದಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸೌದಿಯಲ್ಲಿ ನರ್ಸ್ ಆಗಿರುವ ಅಮಿತ ಒಂದು ವರ್ಷದ ಹಿಂದೆ ಊರಿಗೆ ತಲುಪಿದ್ದರು. ಮೃತರು ಪತಿ, ಮಕ್ಕಳಾದ ಅನೇಯ, ಅನ್ನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.