ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಆಟೋರಿಕ್ಷಾ ಮಗುಚಿ 8 ಮಂದಿಗೆ ಗಾಯ

ಕಾಸರಗೋಡು: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಆಟೋರಿಕ್ಷಾ ನಿಯಂತ್ರಣ ತಪ್ಪಿ ಮಗುಚಿದೆ ೭ ವಿದ್ಯಾರ್ಥಿಗಳು ಹಾಗೂ ಚಾಲಕ ಗಾಯಗೊಂಡಿದ್ದಾರೆ. ಇವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 9.45ರ ವೇಳೆ ಕಾಸರಗೋಡು ನಗರದ ಎಂ.ಜಿ ರಸ್ತೆಯ ಫೋರ್ಟ್ ರೋಡ್ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ. ಮೆಡೋನ್ಹಾ ಶಾಲೆಯ ವಿದ್ಯಾರ್ಥಿಗಳಾದ ಆರಾಧ್ಯ (12), ಅಥರ್ವ (6), ಅರ್ವಿನ್ (7), ನಗರಸಭಾ ಸರಕಾರಿ ಯುಪಿ ಶಾಲೆಯ ಮರಿಯಂ (10), ದೀಪ್ನ (12), ಅನಶ್ವರ (10), ಇಯಾನ್ ಸುನಿಲ್ (6) ಹಾಗೂ ಚಾಲಕ ಉಮೇಶ್‌ರಿಗೂ ಗಾಯವುಂಟಾಗಿದೆ. ಪಳ್ಳಂ ಟಿಐಎಎಲ್‌ಪಿ ಶಾಲೆಯ ರಿಯಾ ಗಾಯವಿಲ್ಲದೆ ಪಾರಾಗಿದ್ದಾಳೆ. ಅಪಘಾತ ಮಾಹಿತಿ ತಿಳಿದು ಮಕ್ಕಳ ಶಾಲಾ ಅಧ್ಯಾಪಕರು ಹಾಗೂ ಹೆತ್ತವರು ಜನರಲ್ ಆಸ್ಪತ್ರೆಗೆ ತಲುಪಿದರು. ಆದರೆ ಯಾವುದೇ ಮಗುವಿನ ಗಾಯ ಗಂಭೀರವಲ್ಲ.

You cannot copy contents of this page