80ರ ಹರೆಯಕ್ಕೆ ಪ್ರವೇಶಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ತಮ್ಮ 79ನೇ ವರ್ಷ ಪೂರ್ತಿಕರಿಸಿ 80ನೇ ಹರೆಯಕ್ಕೆ ಕಾಲಿರಿಸಿದ್ದಾರೆ. ಆದರೆ ಪ್ರತೀ ವರ್ಷ ದಂತೆ ನಡೆಸಲಾಗುತ್ತಿರುವ ತಮ್ಮ ಹುಟು ಹಬ್ಬವನ್ನು ಪಿಣರಾಯಿ ವಿಜಯನ್ ಅವರು ಈ ಬಾರಿ ನಡೆಸದೆ ಬದಿಗಿರಿಸಿ ದ್ದಾರೆ. ನಿನ್ನೆ ಸೇರಿದ ರಾಜ್ಯ ಸಚಿವಸಂಪುಟ ಸಭೆ ಮುಖ್ಯಮಂತ್ರಿಯವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದೆ.
ಅಧಿಕೃತ ದಾಖಲು ಪತ್ರಗಳಲ್ಲಿ 1945 ಮಾರ್ಚ್ 31 ರಂದು ಮುಖ್ಯಮಂತ್ರಿಯವರ ಜನನ ದಿನಾಂಕ ಎಂದು ನಮೂದಿಸಲಾಗಿದೆ. ಆದರೆ 1945 ಮೇ 24 ಅವರ ಸರಿಯಾದ ಜನನ ದಿನಾಂಕವಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಅವರು ನಿನ್ನೆ ಎಂಟು ವರ್ಷವನ್ನೂ ಪೂರ್ತೀಕರಿಸಿದ್ದಾರೆ.
2016 ಮೇ 24ರಂದು ಪಿಣರಾಯಿ ವಿಜಯನ್ ಕೇರಳ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಿದ್ದರು. ಹೀಗೆ ಅಧಿಕಾರಕ್ಕೇರುವ ಹಿಂದಿನ ದಿನ ಅವರ ಹುಟ್ಟು ಹಬ್ಬವಾಗಿತ್ತು. ನಿರಂತರವಾಗಿ ಎಂಟು ವರ್ಷಗಳ ಕಾಲ ಕೇರಳ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದ ಹೊಸ ಇತಿಹಾಸವೂ ಈಗ ಇವರ ಹೆಸರಲ್ಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ರ ಹುಟ್ಟು ಹಬ್ಬಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ನರೇಂದ್ರಮೋದಿ ಹಾಗೂ ಇತರ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.