ಕಾಸರಗೋಡು: ದೀಪಾವಳಿ ಹಬ್ಬದ ಪ್ರಯುಕ್ತ ನಿಗದಿತ ಪ್ರಮಾ ಣಕ್ಕಿಂತಲೂ ಹೆಚ್ಚು ಸುಡುಮದ್ದು ಗಳನ್ನು ದಾಸ್ತಾನು ಇರಿಸುವ ಅಂಗಡಿಗಳನ್ನು ತಪಾಸಣೆಗೊಳ ಪಡಿಸುವ ಕ್ರಮವನ್ನು ಪೊಲೀಸರು ಇನ್ನೂ ಮುಂದುವರಿಸಿದ್ದು, ಇದರಂತೆ ಕೇಳುಗುಡ್ಡೆಯಲ್ಲಿ ಕಾರ್ಯವೆಸಗುತ್ತಿದ್ದ ಪಟಾಕಿ ಮಾರಾಟದಂಗಡಿಗೆ ಕಾಸರಗೋಡು ಪೊಲೀಸರು ನಡೆಸಿದ ತಪಾಸಣೆಯಲ್ಲಿ ಅಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ದಾಸ್ತಾನು ಇರಿಸಿದ್ದ 8893.745 ಕಿಲೋ ಸುಡುಮದ್ದನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅ. ೧೯ರಂದು ಪೊಲೀಸ್ ಕಾರ್ಯಾಚರಣೆ ನಡೆದಿದೆ. ಇದಕ್ಕೆ ಸಂಬಂಧಿಸಿ ಪ್ರಸ್ತುತ ಪಟಾಕಿ ಅಂಗಡಿ ಮಾಲಕ ಮೊಹಮ್ಮದ್ ಕುಂಞಿ ಸಿ.ಎಚ್‌ರ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ.
