9ರ ಹರೆಯದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಚಾರ್ಜ್ ಶೀಟ್ ಸಿದ್ಧ
ಕಾಸರಗೋಡು: ಮನೆಯಲ್ಲಿ ನಿದ್ರಿಸುತ್ತಿದ್ದ ಒಂಭತ್ತರ ಹರೆಯದ ಬಾಲಕಿಯನ್ನು ಅಪಹರಿಸಿ ಬಯಲಿಗೆ ಸಾಗಿಸಿ ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್)ನ್ನು ಘಟನೆ ನಡೆದ ಕೇವಲ ಒಂದು ತಿಂಗಳೊಳಗಾಗಿ ಪೊಲೀಸರು ತಯಾರಿಸಿದ್ದಾರೆ. ಇದು ಅತ್ಯಪೂರ್ವವಾಗಿದೆ. ಅದನ್ನು ಒಂದೆ ರಡು ದಿನಗಳೊಳಗಾಗಿ ಪೊಲೀಸರು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸುವರು.
ಕೊಡಗು ನಾಪೊಕ್ಲು ನಿವಾಸಿ ಪಿ.ಎ. ಸಲೀಂ (35) ಪ್ರಕರಣ ಆರೋಪಿಯಾ ಗಿದ್ದಾನೆ. ಘಟನೆ ನಡೆದ ಬಳಿಕ ಆತ ಆಂಧ್ರಪ್ರದೇಶಕ್ಕೆ ಪಲಾಯನಗೈದು ಅಲ್ಲಿ ತಲೆಮರೆಸಿಕೊಂಡಿದ್ದಾನೆ. ಅಲ್ಲಿಂದಲೇ ಆತನನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶವೊಂದರ ಬಾಲಕಿ ಮೇ 15ರಂದು ಮುಂಜಾನೆ ಆಕೆಯ ಮನೆಯಲ್ಲಿ ನಿದ್ರಿಸಿದ್ದ ವೇಳೆ ಅಲ್ಲಿಗೆ ಅಕ್ರಮವಾಗಿ ನುಗ್ಗಿ ಆಕೆಯನ್ನು ಅಪಹರಿಸಿ ಅಲ್ಲೇ ಅರ್ಧ ಕಿಲೋ ಮೀಟರ್ ದೂರದ ಹೊಲಕ್ಕೆ ಸಾಗಿಸಿ ಅಲ್ಲಿಲೈಂಗಿಕ ಕಿರುಕುಳ ನೀಡಿದ ಬಳಿಕ ಆಕೆಯ ಚಿನ್ನದ ಕಿವಿಯ ಬೆಂಡೋ ಲೆಯನ್ನು ಕಳವುಗೈದ ದೂರಿನಂತೆ ಹೊಸದುರ್ಗ ಪೊಲೀಸರು ಸಲೀಂನ ವಿರುದ್ಧ ಪೋಕ್ಸೋ, ಅಕ್ರಮ ಪ್ರವೇಶ, ಅಪಹರಣ, ಕಳವು ಇತ್ಯಾದಿ ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು.
ಬಾಲಕಿಯ ಕಿವಿಯಿಂದ ತೆಗೆದ ಚಿನ್ನದೊಡವೆಯನ್ನು 6500 ರೂ.ಗೆ ಮಾರಾಟ ಮಾಡಲು ಆರೋಪಿ ಸಲೀಂಗೆ ಸಹಾಯ ಒದಗಿಸಿದ ಆರೋ ಪದಂತೆ ಆತನ ಸಹೋದರಿ ಈಗ ಕೂತು ಪರಂಬದಲ್ಲಿ ವಾಸಿಸುತ್ತಿರುವ ಮೂಲತಃ ಕೊಡಗು ನಿವಾಸಿ ಹೈಬಾ (20)ಳನ್ನೂ ಪೊಲೀಸರು ಆರೋಪಿ ಯನ್ನಾಗಿ ಒಳಪಡಿಸಿದ್ದಾರೆ. ಈ ದೋಷಾರೋಪ ಪಟ್ಟಿಯಲ್ಲಿ 67 ಮಂದಿ ಸಾಕ್ಷಿಗಳಿದ್ದಾರೆ. ರಕ್ತ ಸ್ಯಾಂಪಲ್, ಘಟನೆ ನಡೆದ ವೇಳೆ ಆರೋಪಿ ಧರಿಸಿದ್ದ ಬಟ್ಟೆ, ಬ್ಯಾಗ್, ಟೋರ್ಚ್, ಘಟನೆ ನಡೆದ ಸ್ಥಳದಲ್ಲಿ ತಲೆಕೂದಲು ಇತ್ಯಾದಿ 40ರಷ್ಟು ದಾಖಲುಗಳನ್ನು ಒಳಪಡಿಸಿ ಒಟ್ಟು 300 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು ತಯಾರಿಸಿದ್ದಾರೆ. ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕ ಈ ಪ್ರಕರಣದ ವಿಚಾರಣೆ ನ್ಯಾಯಾಲ ಯದಲ್ಲಿ ಶೀಘ್ರ ಆರಂಭಗೊಳ್ಳಲಿದೆ.