ಚೆರ್ಕಳದಲ್ಲಿ ಫ್ಲೈಓವರ್ ನಿರ್ಮಾಣ: ಪೇಟೆ ಸಮಸ್ಯೆಗಳಿಗೆ ಪರಿಹಾರ ಕಾಣಲು ಮುಸ್ಲಿಂಲೀಗ್ ಆಗ್ರಹ

ಚೆರ್ಕಳ: ಎನ್‌ಎಚ್ 66 ಫ್ಲೈ ಓವರ್ ನಿರ್ಮಾಣದ ಲೋಪದೋಷ ಗಳಿಂದಾಗಿ ಚೆರ್ಕಳ ಪೇಟೆ ಎದುರಿಸುತ್ತಿ ರುವ ಸಂಚಾರ ಸಮಸ್ಯೆಗಳಿಗೆ ಅಧಿಕಾರಿ ಗಳು ಪರಿಹಾರ ಕಾಣಬೇಕೆಂದು ಮುಸ್ಲಿಂ ಲೀಗ್ ಚೆಂಗಳ ಪಂಚಾಯತ್ ಸಮಿತಿ ಆಗ್ರಹಿಸಿದೆ. ಮಳೆಗಾಲ ಆರಂಭಿಸುವ ಮುಂಚಿತವೇ ಸಮಸ್ಯೆಗೆ ಪರಿಹಾರ ಕಾಣಲು ಹೆದ್ದಾರಿ ಪ್ರಾಧಿಕಾರ ಹಾಗೂ ಮೆಗಾ ಕನ್‌ಸ್ಟ್ರಕ್ಷನ್ ಕಂಪೆನಿ ಪ್ರಾಮು ಖ್ಯತೆ ನೀಡಬೇಕೆಂದು, ಇಲ್ಲದಿದ್ದರೆ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಮುಸ್ಲಿಂಲೀಗ್ ಚೆಂಗಳ ಪಂಚಾಯತ್ ಸಭೆ ಮುನ್ನೆಚ್ಚರಿಗೆ ನೀಡಿದೆ. ಸಮಿತಿ ಅಧ್ಯಕ್ಷ ಜಲೀಲ್ ಎರ್ದುಂಕಡವು ಅಧ್ಯಕ್ಷತೆ ವಹಿಸಿದರು. ಮುಸ್ಲಿಂಲೀಗ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ಲ ಕುಂಞಿ ಚೆರ್ಕಳ, ಸಿ.ಎಚ್. ಮುಹಮ್ಮದ್‌ಕುಂಞಿ ಚಾಯಿಂದಾಡಿ, ಮೂಸಾಬಿ ಚೆರ್ಕಳ ಸಹಿತ ಹಲವರು ಭಾಗವಹಿಸಿದರು.

You cannot copy contents of this page