ಬಸ್ನಲ್ಲಿ ಮದ್ಯ ಸಾಗಿಸುತ್ತಿದ್ದ ಪಶ್ಚಿಮ ಬಂಗಾಲ ನಿವಾಸಿ ಸೆರೆ
ಕುಂಬಳೆ: ಪಶ್ಟಿಮ ಬಂಗಾಲ ದಿಂದ ಕೆಲಸಕ್ಕಾಗಿ ಮಂಜೇಶ್ವರಕ್ಕೆ ಬಂದ ಯುವ ಕನ ಕೈಯಿಂದ 60 ಟೆಟ್ರಾ ಪ್ಯಾಕೆಟ್ ಕರ್ನಾಟಕ ಮದ್ಯವನ್ನು ವಶಪಡಿಸಲಾ ಗಿದೆ. ಪಶ್ಚಿಮಬಂಗಾಲ ನಿವಾಸಿ ತಾಯ್ ಮಿಸ್ತ್ರಿ ಎಂಬಾತನ ಕೈಯಿಂದ ಮದ್ಯ ವಶಪ ಡಿಸಿಕೊಂಡು ಆತನನ್ನು ಬಂಧಿಸಲಾಗಿದೆ. ಒಟ್ಟು 22 ಲೀಟರ್ ಮದ್ಯವನ್ನು ಬ್ಯಾಗ್ನಲ್ಲಿ ಬಚ್ಚಿಟ್ಟು ಕರ್ನಾಟಕ ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಅಬಕಾರಿ ಅಧಿಕಾರಿUಳು ದಾಳಿ ನಡೆಸಿದ್ದಾರೆ. ಬಂಧಿತ ವ್ಯಕ್ತಿ ನೀರ್ಚಾಲ್ನಲ್ಲಿ ವಾಸಿಸುತ್ತಿದ್ದಾನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಇನ್ಸ್ಪೆಕ್ಟರ್ ಇರ್ಶಾದ್, ಪ್ರಿವೆಂಟೀ ವ್ ಆಫೀಸರ್ಗಳಾದ ಸಿ.ಕೆ.ವಿ. ಸುರೇಶ್, ಜಿಜಿನ್ ಎಂ.ವಿ ಎಂಬಿವರನ್ನು ಮಂಜೇಶ್ವರದಲ್ಲಿ ಬಸ್ ತಪಾಸಣೆ ನಡೆಸುತ್ತಿದ್ದಾಗ ಮದ್ಯ ಪತ್ತೆಯಾಗಿದೆ.