ಇರಾನ್ ಜೊತೆ ಒಪ್ಪಂದ: ಭಾರತಕ್ಕೆ ಅಮೆರಿಕದ ದಿಗ್ಬಂಧನ ಎಚ್ಚರಿಕೆ

ಹೊಸದಿಲ್ಲಿ: ವ್ಯೂಹಾ ತ್ಮಕವಾಗಿ ಮಹತ್ವದ್ದಾಗಿರುವ ಚಾಬಹಾರ್ ಬಂದರನ್ನು ಹತ್ತು ವರ್ಷಗಳ ಕಾಲ ನಿರ್ವಹಣೆ ಮಾಡಲು ಇರಾನ್ ಸರಕಾರದ ಜತೆ ಭಾರತ ಮಾಡಿಕೊಂಡ ಒಪ್ಪಂದ ಚೀನ ಮಾತ್ರವಲ್ಲ ಈಗ ಅಮೆರಿಕಾದ ಕೆಂಗಣ್ಣಿಗೂ ಗುರಿಯಾಗಿದೆ.

ಇರಾನ್ ಜತೆ ವ್ಯಾಪಾರ ಮಾಡುವ ಯಾವುದೇ ದೇಶವಾದರೂ, ಅಂತಹ ದೇಶಗಳ ದಿಗ್ಬಂಧನದ ಸಂಭಾವ್ಯ ಅಪಾಯವನ್ನು ಎದುರಿಸ ಬೇಕಾಗುತ್ತಿದೆ ಎಂದು ಅಮೆರಿಕಾ ಗುಟುರು ಹಾಕಿದೆ. ಇರಾನ್ ರಹಸ್ಯವಾಗಿ ಅಣ್ವಸ್ತ್ರ ಯೋಜನೆಗಳ್ನು ನಡೆಸುತ್ತಿದೆ ಎಂದು ದೂರುತ್ತಲೇ ಬಂದಿರುವ ಅಮೆರಿಕ ಅದರ ಹೆಸರಲ್ಲಿ ಆ ದೇಶದ ಮೇಲೆ ಈಗಾಗಲೇ ಹಲವು ದಿಗ್ಬಂಧನಗಳನ್ನು ವಿಧಿಸಿದೆ. ಇಂತಹ ಸಂದರ್ಭದಲ್ಲೇ ಇರಾನ್ ಜತೆ ಚಾಬಹಾರ್ ಬಂದರಿನ ವಿಷಯದಲ್ಲಿ  ಭಾರತ ಒಪ್ಪಂದ ಮಾಡಿಕೊಂಡಿರುವುದು ಅಮೆರಿಕಾದ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತ ತನ್ನದೇ ಆದ ವಿದೇಶಾಂಗ ನೀತಿ ಅನುಸರಿಸಲು  ಮುಕ್ತವಾಗಿದೆ. ಚಾಬಹಾರ್ ಒಪ್ಪಂದ ಮತ್ತು ಇರಾನ್ ಜತೆಗಿನ ದ್ವಿಪಕ್ಷೀಯ ಸಂಬಂಧದ ಕುರಿತು ಭಾರತ ತನ್ನ ನಿಲುವನ್ನು ಭಾರತದ ವಿದೇಶಾಂಗ ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆ.

ಪಾಕಿಸ್ತಾನವನ್ನು ಬಳಸದೆ ಅಫ್ಘಾನಿಸ್ಥಾನ ಹಾಗೂ ಕೇಂದ್ರ ಏಷ್ಯ ದೇಶಗಳಿಗೆ ಸರಕು ಸಾಗಿಸಲು ಭಾರತಕ್ಕೆ ಚಾಬಹಾರ್ ಒಪ್ಪಂದ ಅನುಕೂಲಕರವಾಗಲಿದೆ.

ಈ ಒಪ್ಪಂದ ಭಾರತಕ್ಕೆ ಮುಂದೆ ಭಾರೀ ಅಪಾಯ ತಂದೊ ಡ್ಡಬಹುದೆಂದು, ಹೀಗಾಗಿ ಇರಾನ್ ಜೊತೆ ಸಂಬಂಧ ಬೆಳಸಿ ನಿರ್ಬಂ ಧದ ರಿಸ್ಟ್‌ನ್ನು ಮೈಮೇಲೆ ಹಾಕಿ ಕೊಳ್ಳಬೇಡಿ ಎಂದು ಅಮೆರಿಕಾ ಭಾರತಕ್ಕೆ ಧಮ್ಕಿ ಯನ್ನೂ ನೀಡಿದೆ.

ಇನ್ನು ಇರಾನ್‌ನ ಸಾಗರೋ ತ್ತರ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿರುವ ಕಂಪೆನಿಗಳಲ್ಲಿ ಸಹರಾ ಥಂಡರ್ ಪ್ರಮುಖವಾಗಿದೆ. ಈ ಕಂಪೆನಿಗೆ ಭಾರತೀಯ ಮೂಲದ ಮೂರು ಕಂಪೆನಿಗಳ ಸಹಾಯ ನೀಡುತ್ತಿದೆ. ಹೀಗಾಗಿ ಭಾರತೀಯ ಮೂಲದ ಜೆನ್ ಶಿಪ್ಪಿಂಗ್, ಪೋರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸೀ- ಆರ್ಟ್ ಶಿಪ್ ಮ್ಯಾನೇ ಜ್‌ಮೆಟ್ ಪ್ರೈವೇಟ್ ಲಿಮಿಟೆಡ್ ಮೇಲೆ ಅಮೆರಿಕ ಈಗಾಗಲೇ ನಿರ್ಬಂಧ ಹೇರಿದೆ.

You cannot copy contents of this page