ನುಳ್ಳಿಪ್ಪಾಡಿಯಲ್ಲಿ ಅಂಡರ್‌ಪಾಸ್ ಆಗ್ರಹಿಸಿ ಮುಷ್ಕರ ಸಮಿತಿ ನಡೆಸುವ ಹೋರಾಟ ಮೂರನೇ ಹಂತಕ್ಕೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನುಳ್ಳಿಪ್ಪಾಡಿ ಯಲ್ಲಿ ಅಂಡರ್‌ಪಾಸ್ ನಿರ್ಮಿಸಬೇಕೆಂದು ಆಗ್ರಹಿಸಿ ಮುಷ್ಕರ ಸಮಿತಿ ನಡೆಸುವ ಆಂದೋಲನ ಮೂರನೇ ಹಂತಕ್ಕೆ ತಲುಪಿದೆ. ಇಲ್ಲಿ ಅಂಡರ್‌ಪಾಸ್ ಇಲ್ಲದ ಕಾರಣ ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ಸಂಚಾರ ಸ್ವಾತಂತ್ರ್ಯವನ್ನು ನಿಷೇಧಿಸುವ ರೀತಿಯಲ್ಲಿ ಹೆದ್ದಾರಿ ನಿರ್ಮಿಸಲಾಗಿದೆಯೆಂದು ಮುಷ್ಕರ ಸಮಿತಿ ಆರೋಪಿಸಿದೆ. ಅಂಡರ್‌ಪಾಸ್ ನಿರ್ಮಾಣ ಬೇಡಿಕೆ ಮುಂದಿಟ್ಟು ಅಧಿಕಾರಿಗಳನ್ನು ಸಮೀಪಿಸಿದರೂ ತೀರ್ಮಾನ ಉಂಟಾಗದ ಹಿನ್ನೆಲೆಯಲ್ಲಿ ಇಲ್ಲಿ ಕಾಮಗಾರಿಯನ್ನು ಮೊಟಕುಗೊಳಿಸುವ ಮುಷ್ಕರದತ್ತ ಸಮಿತಿ ಹೆಜ್ಜೆಯಿರಿಸಿದೆ. ಕಾಸರಗೋಡು ನಗರಕ್ಕೆ ಕಿಲೋಮೀಟರ್‌ಗಳಷ್ಟು ದೂರ ಸಂಚರಿಸಿ ತೆರಳಬೇಕಾಗಿದ್ದು, ಹಲವು ಬಾರಿ ಜಿಲ್ಲಾಧಿಕಾರಿ ಮುಂಭಾಗ ಈ ವಿಷಯ ಮನದಟ್ಟು ಮಾಡಿಯೂ ಯಾವುದೇ ಕ್ರಮ ಉಂಟಾಗಲಿಲ್ಲ. ಜನರ ಬೇಡಿಕೆಯನ್ನು ಪರಿಗಣಿಸದೆ ನಿರ್ಮಾಣ ನಡೆಸುವುದಾದರೆ ತೀವ್ರ ಹೋರಾಟ ನಡೆಸುವುದಾಗಿ ಮುಷ್ಕರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಪಿ. ರಮೇಶ್, ಅನಿಲ್ ಚೆನ್ನಿಕ್ಕರ, ಆರ್.ಎಸ್. ನುಳ್ಳಿಪ್ಪಾಡಿ, ವರಪ್ರಸಾದ್ ಕೋಟೆಕಣಿ ನೇತೃತ್ವ ನೀಡಿದರು.

RELATED NEWS

You cannot copy contents of this page