ಆನ್‌ಲೈನ್ ವಂಚನೆ: ಯುವತಿಸೆರೆ, ನ್ಯಾಯಾಂಗ ಬಂಧನ

ಕಾಸರಗೋಡು: ಆನ್‌ಲೈನ್ ಮೂಲಕ ಹಣ ವಂಚನೆ ನಡೆಸಿದ ಕಾಸರಗೋಡು ನಿವಾಸಿಯಾದ ಯುವತಿಯನ್ನು ಆಲಪ್ಪುಳದ ಚೇರ್ತಲ ಪೊಲೀಸರು ಬಂಧಿಸಿದ್ದಾರೆ. ಕಾಸರ ಗೋಡು ತೃಕ್ಕರಿಪುರ ಕೈಕೊಟ್ಟುಕಡವು ಎಸ್‌ಪಿ ಹೌಸಿನ ಹರ್‌ಹತ್ ಶಿರೀನ್ (31) ಬಂಧಿತಳಾದ ಯುವತಿ.

ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ನಡೆಸುವ ಹೆಸರಲ್ಲಿ ಆಲಪ್ಪುಳದ ಮುಹಮ್ಮ ಕರಿಪ್ಪೊವೆಳಿ ನಿವಾಸಿ ಸಿರಿನ್ ಚಂದ್ರನ್ ಎಂಬವರಿಂದ 17 ಲಕ್ಷ ರೂ. ಪಡೆದು ಬಳಿಕ ವಂಚನೆ ನಡೆಸಿದ ದೂರಿನಂತೆ ಶಿರಿನ್‌ಳನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಬಂಧಿತಳನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಈ ವಂಚನಾ ಜಾಲದಲ್ಲಿ ಇತರ ಹಲವು ಮಂದಿ ಶಾಮೀಲಾಗಿದ್ದು, ಅವರಲ್ಲಿ ಗುಜರಾತ್ ನಿವಾಸಿಗಳೂ ಒಳಗೊಂಡಿದ್ದಾರೆ. ಸಿರಿನ್ ಚಂದ್ರನ್ ಆನ್‌ಲೈನ್ ಮೂಲಕ ಕಳುಹಿಸಿಕೊಟ್ಟ ಹಣವನ್ನು ಆರು ಮಂದಿ ಸೇರಿ ಹಿಂಪಡೆದಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಗುಜರಾತ್ ನಿವಾಸಿಯೋರ್ವ ೪ ಲಕ್ಷ ರೂ. ಹಿಂಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page