ಮಗುವಿನ ನಾಲಿಗೆಗೆ ಸಮಸ್ಯೆ: ಸಂಬಂಧಿಕರಿಗೆ ತಿಳಿಸದೆ ಶಸ್ತ್ರ ಚಿಕಿತ್ಸೆ ನಡೆಸಿರುವುದು ಲೋಪ- ತನಿಖಾ ವರದಿ

ಕಲ್ಲಿಕೋಟೆ: ಸರಕಾರಿ ಮೆಡಿಕಲ್ ಕಾಲೇಜು ಮಾತೃಶಿಶು ಸಂರಕ್ಷಣಾ ಕೇಂದ್ರದಲ್ಲಿ ನಾಲ್ಕು ವರ್ಷದ ಬಾಲಕಿಯ ಕೈ ಬೆರಳಿಗೆ ನಾಲಿಗೆಗೆ ಶಸ್ತ್ರ ಚಿಕಿತ್ಸೆ ನಡೆಸಿದ ಘಟನೆಯಲ್ಲಿ ಡಾಕ್ಟರ್‌ಗಳಿಗೆ ಲೋಪ ಉಂಟಾಗಿರುವುದಾಗಿ ತನಿಖಾ ವರದಿಯಲ್ಲಿ ಸೂಚಿಸಲಾಗಿದೆ. ಮೆಡಿಕಲ್ ಕಾಲೇಜು ಸುಪರಿಂಟೆಂಡೆಂಟ್ ಡಿ.ಎಂ.ಇ.ಗೆ ಸಮರ್ಪಿಸಿದ ಪ್ರಾಥಮಿಕ ತನಿಖಾ ವರದಿಯಲ್ಲಿ ಈ ವಿಷಯವಿದೆ. ನಾಲಿಗೆಗೆ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಶಸ್ತ್ರಕ್ರಿಯೆ ನಡೆಸಲಾಗಿದೆ. ಆದರೆ ಇದಕ್ಕೂ ಮೊದಲು ಸಂಬಂಧಿಕರಿಗೆ ಈ ವಿಷಯವನ್ನು ತಿಳಿಸಲಾಗಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. ಬಾಯಿಮಾತಲ್ಲಾದರೂ ಈ ವಿಷಯವನ್ನು ತಿಳಿಸಬೇಕಾಗಿತ್ತೆಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಇದೇ ವೇಳೆ ಮೆಡಿಕಲ್ ಬೋರ್ಡ್ ಸಭೆ ಸೇರಬೇಕೆಂಬ ಬೇಡಿಕೆಯೊಂದಿಗೆ ಪೊಲೀಸ್ ಡಿಎಂಒಗೆ ಪತ್ರ ನೀಡಿದೆ. ಶಸ್ತ್ರಚಿಕಿತ್ಸೆ ನಡೆಸಿದ ಡಾಕ್ಟರ್‌ರ ಹೇಳಿಕೆಯನ್ನು ಇಂದು ದಾಖಲುಪಡಿಸಲಾಗುವುದು. ಗುರುವಾರ ಬೆಳಿಗ್ಗೆ ಚೆರುವಣ್ಣೂರ್ ಮದುರಬಜಾರ್ ನಿವಾಸಿಗಳಾದ ದಂಪತಿಯ ಮಗಳಿಗೆ ಈ ರೀತಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಘಟನೆ ವಿವಾದವಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಚಿವೆ ತುರ್ತು ವರದಿ ಆಗ್ರಹಿಸಿದ್ದರು. ಅಸೋಸಿಯೇಟ್ ಪ್ರೊಫೆಸರ್ ಡಾ. ಬಿಜೋನ್ ಜಾನ್ಸನ್‌ರನ್ನು ಅಮಾನತುಗೊಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page