ವಲಸೆ ಕಾರ್ಮಿಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ವಲಸೆ ಕಾರ್ಮಿಕನೋರ್ವ ಕ್ವಾರ್ಟ ರ್ಸ್ನೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ.
ಉತ್ತರ ಪ್ರದೇಶದ ಕಣ್ಣೋಜ್ ನಿವಾಸಿ ರಾಮಕೃಷ್ಣ ಎಂಬವರ ಮಗ ರಾಜೀವ್ ಕುಮಾರ್ (32) ಸಾವನ್ನಪ್ಪಿದ ಯುವಕ. ಇವರು ಕೆಲವು ವಾರಗಳ ಹಿಂದೆಯಷ್ಟೇ ಟೈಲ್ ಕೆಲಸಕ್ಕಾಗಿ ಕಾಸರಗೋಡಿಗೆ ಆಗಮಿಸಿ ನಾಯಮ್ಮಾರ್ಮೂಲೆ ಹೋಮಿಯೋ ಆಸ್ಪತ್ರೆ ಸಮೀಪದ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿ ದ್ದರ. ನಿನ್ನೆ ಅಪರಾಹ್ನ ಕ್ವಾರ್ಟರ್ಸ್ ನೊಳಗೆ ಅವರು ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದ ವಿದ್ಯಾನಗರ ಪೊಲೀಸರು ಘಟನೆ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಸಾಗಿಸಿದರು. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತರು ಪತ್ನಿ ಪೂಜಾ, ಒಂದು ಮಗು, ಸಹೋದರಿ ಅರ್ಪಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.