ಒಂದು ಕೋಟಿ ರೂ. ಬಹುಮಾನ ಬಂದ ಲಾಟರಿ ಟಿಕೆಟ್ ಅಪಹರಣ
ತಿರುವನಂತಪುರ: ಒಂದು ಕೋಟಿ ರೂ. ಬಹುಮಾನ ಬಂದ ಲಾಟರಿ ಟಿಕೆಟನ್ನು ಬೀದಿ ಬದಿ ವ್ಯಾಪಾರಿಯಿಂದ ಲಾಟರಿ ವ್ಯಾಪಾರಿ ಅಪಹರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವಿಷಯವನ್ನು ಸೂಚಿಸಿ ರಾಜ್ಯ ಲಾಟರಿ ಇಲಾಖೆಗೆ ಪೊಲೀಸರು ವರದಿ ಸಲ್ಲಿಸಿದ್ದಾರೆ.
ಮ್ಯೂಸಿಯಂ ಪರಿಸರದಲ್ಲಿ ಟೊಪ್ಪಿ ವ್ಯಾಪಾರ ನಡೆಸುವ ಕಲ್ಯೂರ್ ನಿವಾಸಿ ಸುಕುಮಾರಿಯಮ್ಮ (32)ರ ಬಳಿಯಿಂದ ಲಾಟರಿ ವ್ಯಾಪಾರಿ ಕಣ್ಣನ್ ಪ್ರಜ್ಞಾಪೂರ್ವಕವಾಗಿ ಟಿಕೆಟ್ ಅಪಹರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸುಕುಮಾರಿಯಮ್ಮ ಟಿಕೆಟ್ ಖರೀದಿಸಿರುವುದಕ್ಕೂ ಲಾಟರಿ ವ್ಯಪಾರಿ ಇದನ್ನು ಅಪ ಹರಿಸಿರುವುದಕ್ಕೂ ಸಾಕ್ಷಿಗಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.