ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಂಸ್ಮರಣೆ

ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಆಶ್ರಯದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 33ನೇ ಸಂಸ್ಮರಣೆ, ಪುಷ್ಪಾರ್ಚನೆ ಕಾರ್ಯಕ್ರಮ ಬದಿಯಡ್ಕ ಮಂಡಲ ಕಚೇರಿಯಲ್ಲಿ ನಡೆಯಿತು.
ಹಿರಿಯ ನೇತಾರ ಪಿಜಿ ಚಂದ್ರಹಾಸ ರೈ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿ, ರಾಜೀವ್ ಗಾಂದಿ ದೇಶ ಕಂಡ ಅಪ್ರತಿಮ ನೇತಾರ, ತಂತ್ರಜ್ಞಾನದ ಮೂಲಕ ಭಾರತದ ಕೊಡುಗೆಯನ್ನು ವಿಶ್ವಕ್ಕೆ ಪರಿಚಯಿಸಿದ ಧೀಮಂತ ಪ್ರಧಾನಿ ಎಂದರು.
ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಕಾಂಗ್ರೆಸ್ ಪದಾದಿ üಕಾರಿಗಳಾದ ಕುಂಜಾರು ಮಹಮ್ಮದ್ ಹಾಜಿ, ನಾರಾಯಣ. ಎಂ, ಗಂಗಾಧರ ಗೋಳಿಯಡ್ಕ, ಶಾಫಿ ಗೋಳಿಯಡ್ಕ, ಚಂದ್ರಹಾಸ, ಮಂಡಲ ಪದಾಧಿಕಾರಿ ಗಳಾದ ಜಗನ್ನಾಥ ರೈ ಪೆರಡಾಲ, ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್, ಗೋಪಾಲ ದರ್ಬೆ ತಡ್ಕ, ರಾಮ ಪಟ್ಟಾಜೆ, ಲೋಹಿತಾಕ್ಷ ಪಟ್ಟಾಜೆ, ಕೃಷ್ಣ ದಾಸ್ ದರ್ಬೆತಡ್ಕ, ಸಿರಿಲ್ ಡಿಸೋಜ, ವಾರ್ಡ್ ಪ್ರತಿನಿದಿs ಅನಸೂಯ ಮಾನ್ಯ, ಐಎನ್‌ಟಿಯುಸಿ ಮಂಡಲ ಅಧ್ಯಕ್ಷ ಶ್ರೀರಾಮಕೃಷ್ಣ ವಿದ್ಯಾ ಗಿರಿ, ಸುಂದರ, ಶ್ರೀನಾಥ್, ಶಾಫಿ ಪಯ್ಯಾ ಲಡ್ಕ , ವಾರ್ಡ್ ಪದಾಧಿಕಾರಿಗಳು, ಬೂತ್ ಪದಾಧಿಕಾರಿಗಳು ಮತ್ತು ಕಾರ್ಯ ಕರ್ತರು ಉಪಸ್ಥಿತರಿದ್ದರು. ಮಂದಿನ ಪಂಚಾಯತ್ ಚುನಾವಣೆಗೆ ಬದಿ ಯಡ್ಕದಲ್ಲಿ ಕಾಂಗ್ರೆಸನ್ನು ತಳ ಮಟ್ಟದಲ್ಲಿ ಬಲಪಡಿಸಲು ಕರೆ ನೀಡಲಾಯಿತು.

RELATED NEWS

You cannot copy contents of this page