ಜೊತೆಯಾಗಿ ವಾಸಿಸುವ ಯುವಕನ ಮನೆಗೆ ಕಿಚ್ಚಿಟ್ಟು ನಾಶ: ಯುವತಿ ಸೆರೆ
ಕುಂಬಳೆ: ಜೊತೆಯಾಗಿ ವಾಸಿಸುವ ಯುವಕನ ಮನೆಗೆ ಯುವತಿ ಕಿಚ್ಚಿಟ್ಟಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಕೇಸು ದಾಖಲಿಸಿಕೊಂಡ ಕುಂಬಳ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ಕುಡಾಲ್‌ಮೇರ್ಕಳ ಕಯ್ಯಾರು ಮಾಣಿಯಾತ್ತಡ್ಕದ ನಯನ ಕುಮಾರ್ ಎಂಬವರೊಂದಿಗೆ ವಾಸಿಸುವ ಉಷಾ (35) ಎಂಬಾಕೆಯನ್ನು ಬಂಧಿಸಿದ್ದು, ಈಕೆಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.
ಸೋಮವಾರ ರಾತ್ರಿ ನಡೆದ ಘಟನೆ ಕುರಿತು ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ:
ಉಷಾಳಿಗೆ ಪತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಒಂದೂವರೆ ವರ್ಷದಿಂದ ಅವರನ್ನು ಉಪೇಕ್ಷಿಸಿದ ಉಷಾ ಬಳಿಕ ನಯನಕುಮಾರ್‌ನ ಜೊತೆ ವಾಸಿಸುತ್ತಿದ್ದಳು.
ಇವರ ಹೊರತು ನಯನ ಕುಮಾರ್‌ನ ತಾಯಿಯೂ ಜೊತೆಗೆ ವಾಸಿಸುತ್ತಿ ದ್ದಾರೆ. ಯುವತಿ ತನ್ನ ಮಗನೊಂದಿಗೆ ವಾಸಿಸುವುದರ ಬಗ್ಗೆ ತಾಯಿ ವಿರೋಧ ವ್ಯಕ್ತಪಡಿಸುತ್ತಿದ್ದರೆ ನ್ನಲಾಗಿದೆ. ಸೋಮವಾರ ರಾತ್ರಿ ಮನೆಯಲ್ಲಿ ನಯನಕುಮಾರ್‌ನ ತಾಯಿ ಮಾತ್ರ ಮನೆಯಲ್ಲಿದ್ದರು. ಈ ವೇಳೆ ಉಷಾ ತನ್ನ ಬ್ಯಾಗ್, ಬಟ್ಟೆಬರೆಗಳನ್ನು ಹೊರಗಿಸಿರಿದ ಬಳಿಕ ಹೆಂಚು ಹಾಸಿದ ಮನೆಗೆ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟಿದ್ದಾಳೆ. ಇದರಿಂದ ಹೊರಗೆ ಓಡಿ ಅಪಾಯದಿಂದ ಪಾರಾದ ನಯನ ಕುಮಾರ್‌ರ ತಾಯಿ ಬೊಬ್ಬಿಟ್ಟು ನೆರೆಮನೆ ನಿವಾಸಿಗಳಿಗೆ ವಿಷಯ ತಿಳಿಸಿದ್ದರು. ಜನರು ತಲುಪಿ ಬೆಂಕಿ ನಂದಿಸಿದ್ದಾರೆ. ಆದರೂ ೧ ಲಕ್ಷ ರೂಪಾಯಿಗಳ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ನಯನ ಕುಮಾರ್‌ನ ತಾಯಿ ನೀಡಿದ ದೂರಿನಂತೆ ಉಷಾಳ ವಿರುದ್ಧ ಕೇಸು ದಾಖಲಿಸಿ ಆಕೆಯನ್ನು ಬಂಧಿಸಲಾ ಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.