ವರದಕ್ಷಿಣೆಗಾಗಿ ಒತ್ತಾಯಿಸಿ ಯುವತಿಗೆ ಕಿರುಕುಳ: ಪತಿ ಸಹಿತ ನಾಲ್ಕು ಮಂದಿ ವಿರುದ್ಧ ಕೇಸು
ಉಪ್ಪಳ: ಹೆಚ್ಚುವರಿ ವರದಕ್ಷಿಣೆ ತರಬೇಕೆಂದು ಒತ್ತಾಯಿಸಿ ಯುವತಿಗೆ ಕಿರುಕುಳ ನೀಡಿದ ಆರೋಪದಂತೆ ಆಕೆಯ ಪತಿ ಸಹಿತ ನಾಲ್ಕು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪಾತೂರು ಕಜೆ ನಿವಾಸಿ ಇಸ್ಮಾಯಿಲ್ ಮುನೀರ್, ಈತನ ತಂದೆ ಉಮ್ಮರ್, ತಾಯಿ ಅಲೀಮ, ಸಹೋದರ ಸೈನುದ್ದೀನ್ ಎಂಬವರ ವಿರುದ್ಧ ಕೇಸು ದಾಖಲಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಪಾವೂರಿನ ಹಮೀದ್ ಎಂಬವರ ಪುತ್ರಿ ನಬೀಸ (30) ನೀಡಿದ ದೂರಿನಂತೆ ಈ ನಾಲ್ಕು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.
ನಬೀಸ ಹಾಗೂ ಇಸ್ಮಾಯಿಲ್ ಮುನೀರ್ನ ಮದುವೆ 2016ರಲ್ಲಿ ನಡೆದಿತ್ತು. ಈ ವೇಳೆ 30 ಪವನ್ ಚಿನ್ನಾಭರಣ ಹಾಗೂ 2 ಲಕ್ಷ ರೂಪಾಯಿ ವಧುವಿನ ಮನೆಯಿಂದ ಇಸ್ಮಾಯಿಲ್ ಮುನೀರ್ಗೆ ನೀಡಿದ್ದರು. ಆದರೆ ಅನಂತರ ಹೆಚ್ಚುವರಿ ವರದಕ್ಷಿಣೆ ತರ ಬೇಕೆಂದು ಒತ್ತಾಯಿಸಿ ಪತಿ ಹಾಗೂ ಮನೆಯವರು ನಬೀಸರಿಗೆ ಕಿರುಕುಳ ನೀಡಿ ದ್ದಾರೆಂದು ದೂರಲಾಗಿದೆ. ಈ ಬಗ್ಗೆ ನಬೀಸ ನ್ಯಾಯಾಲಯದಲ್ಲಿ ದೂರು ನೀಡಿದ್ದು ಇದರಂತೆ ನ್ಯಾಯಾ ಲಯದ ನಿರ್ದೇಶ ಮೇರೆಗೆ ಪೊಲೀ ಸರು ಕೇಸು ದಾಖ ಲಿಸಿಕೊಂಡಿದ್ದಾರೆ.