ರಾಜ್ಯ ಸರಕಾರದಿಂದ ಜನರಿಗೆ ವಂಚನೆ: ಬಿಜೆಪಿ ಆರೋಪ

ಮಂಜೇಶ್ವರ: ಲೈಫ್ ಮನೆ ನಿರ್ಮಾಣ ಸ್ಥಗಿತವಾಗಿದ್ದು, ಕೇರಳ ಸರಕಾರ ನೀಡಬೇಕಾದ ಫಲಾನುಭವಿಗಳ ಪಾಲು ನೀಡುತ್ತಿಲ್ಲ. ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಕಳ್ಳತನ ವ್ಯಾಪಕವಾಗಿದೆ, ಪೊಲೀಸ್ ಇಲಾಖೆ ನಿಷ್ಕಿೃಯವಾಗಿದೆ ಎಂದು ಬಿಜೆಪಿ ದೂರಿದೆ. ವಿದ್ಯುತ್ ಸಮಸ್ಯೆ ಕೇಳೋರಿಲ್ಲ. ಪೆನ್ಸನ್ ಹಣ ಬರುತ್ತಿಲ್ಲ ಹೀಗೆ ರಾಜ್ಯ ಸರಕಾರ ಜನರನ್ನು ವಂಚಿಸುತ್ತಿದೆ. ಎಂದು ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಆರೋಪಿಸಿದೆ. ಹೊಸಬೆಟ್ಟು ದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಸಭೆ ಜರಗಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಉದ್ಘಾಟಸಿ, ಮಾತನಾಡಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಉಪಸ್ಥಿತರಿದ್ದರು. ಯಾದವ ಬಡಾಜೆ ಅಧ್ಯಕ್ಷತೆ ವಹಿಸಿದ್ದರು, ಮುಖಂಡರಾದ ಲಕ್ಷ್ಮಣ ಬಿ.ಎಂ, ವಿನಯ ಭಾಸ್ಕರ್, ನಿಶಾ ಭಟ್, ನವೀನ್ ಮಜಲು, ಸೂರಜ್ ಹೊಸಬೆಟ್ಟು, ಚಂದು ಮಂಜೇಶ್ವರ ಉಪಸ್ಥಿತರಿದ್ದರು. ಸೌಹಾರ್ಧ ನಾವಡ ಸ್ವಾಗತಿಸಿ, ತುಳಸಿ ವಂದಿಸಿದರು.

You cannot copy contents of this page