ಬೈಕ್ ಢಿಕ್ಕಿ ಹೊಡೆದು ಮುಸ್ಲಿಂ ಲೀಗ್ ನೇತಾರ ಮೃತ್ಯು
ಕಾಸರಗೋಡು: ಚಿತ್ತಾರಿಯಲ್ಲಿ ಬೈಕ್ ಢಿಕ್ಕಿ ಹೊಡೆದು ಮುಸ್ಲಿಂ ಲೀಗ್ ನೇತಾರ ಮೃತಪಟ್ಟ ಘಟನೆ ನಡೆದಿದೆ. ಅಜಾನೂರು ಪಂಚಾ ಯತ್ ಸ್ವತಂತ್ರ ಕರ್ಷಕ ಸಂಘದ ಅಧ್ಯಕ್ಷರೂ, ಕಾಞಂಗಾಡ್ ನಗರದ ಕಟ್ಟಡ ಮಾಲಕನಾದ ಚಿತ್ತಾರಿ ಚಾಮುಂಡಿಕುನ್ನು ನಿವಾಸಿ ಸಿ.ಎಚ್. ಅಬೂಬಕರ್ ಹಾಜಿ (74) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 8 ಗಂಟೆಗೆ ಮಸೀದಿಗೆ ನಡೆದು ಹೋಗುತ್ತಿದ್ದಾಗ ಅಬೂಬಕರ್ ಹಾಜಿಯವರಿಗೆ ಅವರ ಮನೆ ಸಮೀಪದ ರಸ್ತೆಯಲ್ಲಿ ಬೈಕ್ ಢಿಕ್ಕಿ ಹೊಡೆದಿದೆ. ಗಂಭೀರಗಾಯ ಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ದಾರಿ ಮಧ್ಯೆ ನಿಧನ ಸಂಭವಿಸಿದೆ. ಅಪಘಾತ ಸೃಷ್ಟಿಸಿದ ಬೈಕ್ನಲ್ಲಿ ದ್ದವರೂ ಗಾಯಗೊಂಡಿದ್ದಾರೆ. ಅವ ರನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ಮೃತರು ಪತ್ನಿ ಸೌದ, ಮಕ್ಕಳಾದ ಹನೀಫ್ ಸಿ.ಎಚ್, ಸಲೀಂ ಸಿ.ಎಚ್, ಶರೀಫ್ ಸಿ.ಎಚ್, ಮುನೀರ್, ಮುಜೀಬ್, ಬಾಸಿತ್, ತಸ್ಲೀಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ