ಕುಂಬಳೆ: ಧಾರಾಕಾರ ಮಳೆಗೆ ಮನೆಯೊಂದು ಕುಸಿದುಬಿದ್ದಿದೆ. ಬಂಬ್ರಾಣ ಅಂಡಿತ್ತಡ್ಕ ಅಣೆಕಟ್ಟು ಬಳಿ ವಾಸಿಸುವ ಅಬ್ದುಲ್ ರಹ್ಮಾನ್ ಕರಿಮೂಲೆ ಎಂಬವರ ಹೆಂಚಿನ ಮನೆ ಕುಸಿದಿದೆ. ಮೊನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ವೇಳೆ ಮನೆ ಕುಸಿದಿದ್ದು, ಸದ್ದು ಕೇಳಿ ಅಬ್ದುಲ್ ರಹ್ಮಾನ್ ಹಾಗೂ ಪತ್ನಿ ಉಮ್ಮಾಲಿ ಹೊರಗೆ ಓಡಿದುದರಿಂದ ಅಪಾಯದಿಂದ ಪಾರಾಗಿದ್ದಾರೆ.