ಬಾಲಕಿಯ ಅಪಹರಿಸಿ ದೌರ್ಜನ್ಯ: ಆರೋಪಿಯನ್ನು ಕಸ್ಟಡಿಗೆ ತೆಗೆಯಲು ನ್ಯಾಯಾಲಯಕ್ಕೆ ಅರ್ಜಿ
ಹೊಸದುರ್ಗ: ಮನೆಯಲ್ಲಿ ನಿದ್ರಿಸುತ್ತಿದ್ದ ಹತ್ತರ ಹರೆಯದ ಬಾಲಕಿಯನ್ನು ಅಪಹರಿಸಿಕೊಂಡೊಯ್ದು ಲೈಂಗಿಕ ದೌರ್ಜನ್ಯಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿರುವ ಆರೋಪಿ ಕೊಡಗು ನಾಪೊಕ್ಲುವಿನ ಪಿ.ಎ. ಸಲೀಂ (38) ಎಂಬಾತನನ್ನು ಕಸ್ಟಡಿಗೆ ನೀಡಬೇಕೆಂದು ವಿನಂತಿಸಿ ತನಿಖಾಧಿಕಾರಿಯಾದ ಹೊಸದುರ್ಗ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಪಿ. ಆಸಾದ್ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿ ದ್ದಾರೆ. ಐದು ದಿನಗಳಕಾಲ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ಹೊಸದುರ್ಗ ಜ್ಯುಡೀಶಿಯಲ್ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ನಾಳೆ ಪರಿಗಣಿಸುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ. ಘಟನೆ ಸ್ಥಳದಿಂದ ಪೊಲೀಸರು ಸಂಗ್ರಹಿಸಿದ ಆರೋಪಿಯ ತಲೆಕೂದಲು ಪರಿಶೀಲಿಸಿ ಖಚಿತಪಡಿಸಲು ಆರೋಪಿಯ ಡಿಎನ್‌ಎ ತಪಾಸಣೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಸಂಗ್ರಹಿಸಿದ ಆರೋಪಿಯ ಬಟ್ಟೆಬರೆಗಳನ್ನು ಕಣ್ಣೂರಿನ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಆರೋಪಿಯ ಕೈಯಲ್ಲಿ ಸಣ್ಣ ಟಾರ್ಚ್ ಇತ್ತೆಂದು ಬಾಲಕಿ ತಿಳಿಸಿದ್ದಳು. ಆ ಟಾರ್ಚ್‌ನ್ನು ಪೊಲೀಸರು ಆರೋಪಿಯ ಬ್ಯಾಗ್‌ನಿಂದ ಬಿಲ್ ಪತ್ತೆಹಚ್ಚಿದ್ದಾರೆ. ಬಾಲಕಿಯ ದೇಹದಿಂದ ಆರೋಪಿ ದರೋಡೆಗೈದ ಚಿನ್ನಾಭರಣವನ್ನು ಪತ್ತೆಹಚ್ಚಬೇಕಿದೆ. ಅದಕ್ಕಾಗಿ ಆರೋಪಿ ಕಸ್ಟಡಿಗೆ ಲಭಿಸಿದ ಬಳಿಕ ಆತನನ್ನು ಕೂತುಪರಂಬದ ಜ್ಯುವೆಲ್ಲರಿಗೆ ಕೊಂಡೊಯ್ಯಲಾಗು ವುದು. ಚಿನ್ನಾಭರಣವನ್ನು 6 ಸಾವಿರ ರೂಪಾಯಿಗೆ ಮಾರಾಟ ನಡೆಸಿರುವುದು ಆರೋಪಿಯ ಬ್ಯಾಗ್‌ನಿಂದ ಪತ್ತೆಯಾಗಿದೆ. ಚಿನ್ನ ಮಾರಾಟಗೈಯ್ಯಲು ಆರೋಪಿಗೆ ಸಹಾಯವೊದಗಿಸಿರುವುದು ಆತನ ಸಹೋದರಿಯಾಗಿದ್ದಾಳೆಂದು ಪೊಲೀಸರು ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ.