ಅಡ್ಕಸ್ಥಳ ರೇಶನ್ ಅಂಗಡಿ ಸ್ಥಳಾಂತರಕ್ಕೆತ್ನ ಆರೋಪ

ಅಡ್ಕಸ್ಥಳ: 40 ವರ್ಷದಿಂದ ಅಡ್ಕಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ರೇಶನ್ ಅಂಗಡಿಯನ್ನು 5 ಕಿಲೋ ಮೀಟರ್ ದೂರದ ಅಡ್ಯನಡ್ಕಕ್ಕೆ ಸ್ಥಳಾಂತರಿಸಲು ಯತ್ನ ನಡೆಯುತ್ತಿದೆಯೆಂದು ಆರೋಪಿಸಲಾಗಿದೆ.

ಸ್ಥಳಾಂತರ ಮಾಡುವುದಕ್ಕಾಗಿ ಅಡ್ಯನಡ್ಕದಲ್ಲಿ ಒಂದು ಅಂಗಡಿಯ ಕೊಠಡಿಗೆ ರೇಶನ್ ಶಾಪ್ ಎಂಬ ಬೋರ್ಡ್ ಇಟ್ಟಿರುವುದಾಗಿಯೂ, ಅಡ್ಕಸ್ಥಳ ರೇಶನ್ ಅಂಗಡಿಯನ್ನು ಶೀಘ್ರವೇ ಅಲ್ಲಿಗೆ ಸ್ಥಳಾಂತರ ಮಾಡುವು ದಕ್ಕಿರುವ ಯತ್ನ ಆರಂಭಗೊಂಡಿದೆಯೆಂದು ಸ್ಥಳೀಯರು ದೂರುತ್ತಾರೆ. ಇದರ ಹಿಂದೆ ಕೆಲವು ರಾಜಕೀಯದವರ ಹಸ್ತಕ್ಷೇಪವೂ ಇದೆಯೆಂದೂ ದೂರಲಾಗಿದೆ.

ಸ್ಥಳೀಯರು ಈ ಬಗ್ಗೆ ಚರ್ಚೆ ನಡೆಸಲಾರಂಭಿಸಿದಾಗ ವಾರದಲ್ಲಿ ಮೂರು ದಿನ ಅಡ್ಕಸ್ಥಳದಲ್ಲೂ, ಮೂರು ದಿನ ಅಡ್ಯನಡ್ಕದಲ್ಲೂ ರೇಶನ್ ಅಂಗಡಿ ಕಾರ್ಯಾಚರಿಸಲಿ ದೆಯೆಂದು ಖಚಿತವಲ್ಲದ ಸುದ್ದಿ ಇದೆ. ಈ ವಿಷಯದಲ್ಲಿ ಅಧಿಕಾರಿಗಳು ಮಧ್ಯೆಪ್ರವೇಶಿಸಬೇಕೆಂದು, ಅಡ್ಕಸ್ಥಳದ ರೇಶನ್ ಅಂಗಡಿಯನ್ನು ಅಲ್ಲೇ ಉಳಿಸಿಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page