ಮೊಬೈಲ್ ಫೋನ್ ಪತ್ತೆ: ಜೈಲಿನಲ್ಲಿ ಕೊಲೆ ಪ್ರಕರಣದ ಆರೋಪಿಗಳ ಮಧ್ಯೆ ಮಾರಾಮಾರಿ: ಸೆಂಟ್ರಲ್ ಜೈಲಿಗೆ ವರ್ಗಾವಣೆ
ಕಾಸರಗೋಡು: ಜೈಲಿನೊಳಗೆ ಜೈಲು ಸಿಬ್ಬಂದಿಗಳು ನಡೆಸಿದ ಪರಿಶೀಲನೆಯಲ್ಲಿ ಮೊಬೈಲ್ ಫೋನ್ ಪತ್ತೆಯಾದ ಹೆಸರಲ್ಲಿ ಕೊಲೆ ಪ್ರಕರಣದ ಆರೋಪಿ ಗಳಿಬ್ಬರು ಪರಸ್ಪರ ಹೊಡೆದಾಡಿ ಕೊಂಡ ಘಟನೆ ನಡೆದಿದೆ.
ಚೀಮೇನಿ ತೆರೆದ ಬಂಧೀಖಾ ನೆಯಲ್ಲಿ ಈ ಘಟನೆ ನಡೆದಿದೆ. ಜೈಲು ಸಿಬ್ಬಂದಿಗಳು ಎರಡು ದಿನಗಳ ಹಿಂದೆ ಜೈಲಿನೊಳಗೆ ತಪಾಸಣೆಯಲ್ಲಿ ತೊಡಗಿದಾಗ ಮೊಬೈಲ್ ಫೋನೊಂದನ್ನು ಪತ್ತೆಹಚ್ಚಿದ್ದರು. ಅದರ ಹೆಸರಲ್ಲಿ ಪೆರ್ಲ ಜಬ್ಬಾರ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಪಿ.ವಿ. ಅಬ್ದುಲ್ ಬಶೀರ್ ಮತ್ತು ಮಹೇಶ್ ರೈ ಜೈಲಿನೊಳಗೆ ಪರಸ್ಪರ ಹೊಡೆದಾಟ ನಡೆಸಿದ್ದಾ ರೆಂದೂ ಅದರಿಂದಾಗಿ ಅವರನ್ನು ನಂತರ ಇಲ್ಲಿಂದ ಕಣ್ಣೂರು ಸೆಂಟ್ರಲ್ ಜೈಲಿಗೆ ವರ್ಗಾವಣೆ ಮಾಡಲಾಗಿದೆ ಯೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಚೀಮೇನಿ ತೆರೆದ ಬಂಧೀಖಾನೆಯಲ್ಲಿ ಖೈದಿ ಮಹೇಶ್ ರೈಯ ಕೈಯಿಂದ ಜೈಲು ಅಧಿಕಾರಿಗಳು ಎರಡು ದಿನಗಳ ಹಿಂದೆ ಮೊಬೈಲ್ ಫೋನೊಂ ದನ್ನು ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದರು. ಆತನ ಕೈಯಲ್ಲಿ ಮೊಬೈಲ್ ಫೋನ್ ಇದ್ದ ವಿಷಯ ಅಬ್ದುಲ್ ಬಷೀರ್ ಜೈಲು ಸಿಬ್ಬಂದಿಗಳಿಗೆ ಗುಪ್ತವಾಗಿ ಮಾಹಿತಿ ನೀಡಿದ್ದನೆಂದು ಆರೋಪಿಸಿ ಅದರ ಹೆಸರಲ್ಲಿ ಆತ ಮತ್ತು ಮಹೇಶ್ ರೈ ಮಧ್ಯೆ ಪರಸ್ಪರ ಜಗಳ ಉಂಟಾಗಲು ಕಾರಣ ವಾಗಿದೆಯೆಂದು ಹೇಳ ಲಾಗುತ್ತಿದೆ. ಈ ಜಗಳದಲ್ಲಿ ಅಬ್ದುಲ್ ಬಷೀರ್ ಗಾಯಗೊಂ ಡಿದ್ದು, ಆ ಬಗ್ಗೆ ಜೈಲು ಅಧಿಕಾರಿ ಗಳು ನೀಡಿದ ದೂರಿನಂತೆ ಚೀಮೇನಿ ಪೊಲೀ ಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ.