ಮಧೂರು ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾರ್ಚ್ 30ರಂದು
ಮಧೂರು: ನವೀಕರಣಕೊಂಡ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ 2025 ಮಾರ್ಚ್ 30ರಂದು ನಡೆಯಲಿದೆ. ಬ್ರಹ್ಮಕಲಶೋ ತ್ಸವದ ಅಂಗವಾಗಿ ವಿವಿಧ ಕಾರ್ಯ ಕ್ರಮಗಳು ಮಾರ್ಚ್ 25ರಿಂದ ಆರಂಭ ಗೊಳ್ಳಲಿದೆ. ೩೦ರಂದು ಬೆಳಿಗ್ಗೆ 9.10 ರಿಂದ 11 ಗಂಟೆ ಮಧ್ಯೆ ಬ್ರಹ್ಮಕಲಶ ನಡೆಯಲಿದೆ ಯೆಂದು ಇತ್ತೀಚೆಗೆ ನಡೆದ ಸಭೆಯಲ್ಲಿ ತಿಳಿಸಲಾಗಿದೆ.
ಕ್ಷೇತ್ರ ಸಮಿತಿ, ನವೀಕರಣ ಸಮಿತಿಯ ಸಭಯಲ್ಲಿ ಮಲಬಾರ್ ದೇವಸ್ವಂ ಮಂಡಳಿ ಕಮಿಶನರ್ ಟಿ.ಸಿ. ಬಿಜು ಬ್ರಹ್ಮಕಲಶೋತ್ಸವ ದಿನಾಂಕ ಹಾಗೂ ಮುಹೂರ್ತವನ್ನು ಘೋಷಿಸಿ ದರು. ಸಭೆಯನ್ನು ಕ್ಷೇತ್ರದ ಪವಿತ್ರಪಾಣಿ ರತನ್ ಕುಮಾರ್ ಕಾಮಡ ಉದ್ಘಾಟಿ ಸಿದ್ದು, ಡಾ| ಬಿ.ಎಸ್. ರಾವ್ ಅಧ್ಯಕ್ಷತೆ ವಹಿಸಿದರು. ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ, ಮಲಬಾರ್ ದೇವಸ್ವಂ ಮಂಡಳಿಯ ಅಸಿಸ್ಟೆಂಟ್ ಕಮಿಶನರ್ ಪ್ರದೀಪ್ ಕುಮಾರ್, ಕ್ಷೇತ್ರ ಎಕ್ಸಿಕ್ಯೂಟಿವ್ ಆಫೀಸರ್ ಟಿ. ರಾಗೇಶ್, ಕೆ. ಮಂಜುನಾಥ ಕಾಮತ್, ಕೆ. ಗಿರೀಶ್, ನವೀಕರಣ ಸಮಿತಿ ಪ್ರಧಾನ ಕಾರ್ಯ ದರ್ಶಿ ಜಯದೇವ ಖಂಡಿಗೆ, ನಾರಾ ಯಣ ಮಯ್ಯ ಎಂಬಿವರು ಮಾತನಾಡಿ ದರು. ಕ್ಷೇತ್ರ ನವೀಕರಣ ಸಮಿತಿ ಅಧ್ಯಕ್ಷ ಯು.ಟಿ. ಆಳ್ವರ ನಿಧನಕ್ಕೆ ಸಭೆ ಸಂತಾಪ ಸೂಚಿಸಿತು. ನವೀಕರಣ ಸಮಿತಿ ಅಧ್ಯಕ್ಷರಾಗಿ ಡಾ| ಬಿ.ಎಸ್. ರಾವ್ ಅವರನ್ನು ನೇಮಿಸಲಾಯಿತು.
22 ಕೋಟಿ ರೂಪಾಯಿ ಖರ್ಚಿನಲ್ಲಿ ಕ್ಷೇತ್ರದ ನವೀಕರಣ ಕೆಲಸಗಳನ್ನು ಪೂರ್ತಿಗೊಳಿಸಲಾಗಿದೆ.