ವಾಲಿಕೊಂಡು ನಿಂತು ಭೀತಿಗೆ ಕಾರಣವಾದ ವಿದ್ಯುತ್ ಕಂಬಗಳು: ಬದಲಿಸಲು ಊರವರ ಒತ್ತಾಯ

ಉಪ್ಪಳ: ಮಳೆ, ಗಾಳಿ ತೀವ್ರಗೊಳ್ಳಲಿರುವಂತೆÀ ಯಾವುದೇ ಕ್ಷಣದಲ್ಲಿ ಕುಸಿದು ಅನಾಹುತ ಸಂಭವಿಸಬಹುದಾದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಊರವರು ಒತ್ತಾಯಿಸಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ವಿದ್ಯುತ್ ಸೆಕ್ಷನ್ ವ್ಯಾಪ್ತಿಗೊಳಪಟ್ಟ ಪ್ರತಾಪನಗರದ ಒಳರಸ್ತೆಯಲ್ಲಿ ಎರಡು ವಿದ್ಯುತ್ ಕಂಬ ಆತಂಕ ಸೃಷ್ಟಿಸಿದೆ. ಈ ಹಿಂದೆ ನೀರು ಹರಿಯುವ ಚರಂಡಿಯಲ್ಲಿ ಕಂಬವನ್ನು ಸ್ಥಾಪಿಸಲಾಗಿತ್ತು. ಇಲ್ಲಿ ಮಳೆ ನೀರು ಹರಿದು ಬುಡದ ಮಣ್ಣು ಸವೆದು ಕಂಬ ಒಂದು ಭಾಗಕ್ಕೆವಾಲಿದೆ.
ಮಳೆ, ಗಾಳಿಗೆ ಯಾವುದೇ ಹೊತ್ತಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವುದು ಸ್ಥಳೀಯರನ್ನು ಭೀತಿಗೊಳಗಾಗುವಂತೆ ಮಾಡಿದೆ. ಈ ಪರಿಸರದಲ್ಲಿ ಮನೆಗಳು ಹಾಗೂ ರಸ್ತೆಯಿಂದ ಮದ್ರಾಸ ಸಹಿತ ಶಾಲೆಗೆ ಮಕ್ಕಳು ನಡೆದು ಹÉÆÃಗುತ್ತಿದ್ದಾರೆ. ನಿರಂತರ ವಾಹನ ಸಂಚಾರ ವಿರುವ ಪ್ರದೇಶವಾಗಿದೆ. ಈ ಬಗ್ಗೆ ಸಂಬAಧಪಟ್ಟ ಉದ್ಯೋಗಸ್ಥರಲ್ಲಿ ವಾರ್ಡ್ ಜನಪ್ರತಿ ನಿಧಿ ಹಾಗೂ ಸ್ಥಳೀಯರು ತಿಳಿಸಿದರೂ ಬದಲಾಯಿಸುವ ಕ್ರಮಕ್ಕೆ ಮುಂದಾಗುತ್ತಿಲ್ಲವೆAದು ದೂರಲಾಗಿದೆ. ಕುಸಿದು ಬಿದ್ದು ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತು ಕಂಬಗಳನ್ನು ಬದಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

You cannot copy contents of this page