ಸರ್ಕಾರ ರಚನೆಗೆ ಕಸರತ್ತು ‘ಕೈ’ ಬಿಟ್ಟ ‘ಇಂಡಿಯಾ’ ಮೈತ್ರಿಕೂಟ

ನವದೆಹಲಿ: ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಜೂನ್ ೮ರಂದು ಅಸ್ತಿತ್ವಕ್ಕೆ ಬರಲಿರುವಂತೆಯೇ ಸರಕಾರ ರಚನೆಗೆ ವಿಪಕ್ಷಗಳ ಮೈತ್ರಿ ಕೂಟವಾದ ‘ಇಂಡಿಯಾ’ ಆರಂಭಿಸಿದ್ದ ಕಸರತ್ತನ್ನು ಕೈಬಿಟ್ಟಿದೆ. ನಾವು ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವೆವು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಜನಾದೇಶದ ನಂತರ ನಾವು ಸರಕಾರ ರಚಿಸಲು ಹಕ್ಕು ಮಂಡಿಸುವುದಿಲ್ಲ. ಇನ್ನು ನಮ್ಮ ರಾಜಕೀಯ ಹೋರಾಟ ಲೋಕಸಭೆಯಲ್ಲಿ ನಡೆಯಲಿದೆ ಎಂದು ಇನ್ನೊಂದೆಡೆ ಕಾಂಗ್ರೆಸ್ ವರಿಷ್ಠ ಸೋನಿಯಾ ಗಾಂಧಿಯವರೂ ಹೇಳಿದ್ದಾರೆ.

ಬಿಜೆಪಿ ವಿರುದ್ಧದ ನಮ್ಮ ಹೋರಾಟ ಇನ್ನೂ ಮುಂದು ವರಿಸುವೆವು. ಮೋದಿ ಆಡಳಿತ ಬೇಡ ಎಂಬ ಜನರ ಭಾವನೆಗಳನ್ನು ಗಮನ ದಲ್ಲಿರಿಸಿಕೊಂಡು ನಾವು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊ ಳ್ಳುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

You cannot copy contents of this page