ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು ಬೈಕ್ : ಸವಾರ ವಿದ್ಯಾರ್ಥಿ ದಾರುಣ ಮೃತ್ಯು

ಕಾಸರಗೋಡು:  ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಾದ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ನೀಲೇಶ್ವರ ಆಲಂಕಿಳಿಲ್ ನಿವಾಸಿ ಜ್ಯೋತಿಷ್ ಎಂಬವರ ಪುತ್ರ ಕಯ್ಯೂರು ಸರಕಾರಿ ಐಟಿ ಕಾಲೇಜಿನ ವಿದ್ಯಾರ್ಥಿ ವಿಷ್ಣು (18) ಸಾವನ್ನಪ್ಪಿದ ದುರ್ದೈವಿ.  ಪಾಲಾಯಿಯ  ಬ್ರಿಡ್ಜ್ ಬಳಿ ಇಂದು ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ. ವಿಷ್ಣು ಬೈಕ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ಎದುರುಭಾಗದಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ವಿಷ್ಣುವನ್ನು  ತಕ್ಷಣ ಆಸ್ಪತ್ರೆಗೆ ಸಾಗಿಸಿ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ವಿಷ್ಣುವಿನ ತಂದೆ ಜ್ಯೋತಿಷ್ ಮೂಲತಃ ಉದುಮ ಬಾರಾ ನಿವಾಸಿಯಾಗಿದ್ದಾರೆ. ವಿಷ್ಣು ನೀಲೇಶ್ವರ ದಲ್ಲಿರುವ ತನ್ನ ತಾಯಿ ಮನೆಯಲ್ಲೇ ವಾಸಿಸಿ ಅಲ್ಲಿಂದ ಕಾಲೇಜಿಗೆ ಹೋಗುತ್ತಿದ್ದನು.

You cannot copy contents of this page