ಬೈಕ್ ಟೆಲಿಫೋನ್ ಕಂಬಕ್ಕೆ ಢಿಕ್ಕಿ : ಹೊಡೆದು ಇಬ್ಬರು ಯುವಕರು ಮೃತ್ಯು
ಕಾಸರಗೋಡು: ಬೈಕ್ ಟೆಲಿಫೋನ್ ಕಂಬಕ್ಕೆ ಬಡಿದು ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಸೌತ್ ತೃಕ್ಕರಿಪುರ ಮೊಟ್ಟಮ್ಮಲ್ ಈಸ್ಟ್‌ನ ಮಹಮ್ಮದ್ ಕುಂಞಿ ಎಂಬವರ ಪುತ್ರ ವಿ.ಪಿ.ಎಂ. ಮುಹಮ್ಮದ್ ಸುಹೈಸ್ (27), ಪಯ್ಯನ್ನೂರು ಪೆರುಂಬಳ ಕಕ್ಕೋಟಕ್ಕತ್ತ್ ನಿವಾಸಿ ಶಾಹುಲ್ ಹಮೀದ್‌ರ ಪುತ್ರ ಕೆ. ಶಾಹಿದ್ (22) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನಿನ್ನೆ ರಾತ್ರಿ 12.30ರ ವೇಳೆ ಈ ಅಪಘಾತ ಸಂಭವಿಸಿದೆ. ಈ ಇಬ್ಬರು ಬೈಕ್‌ನಲ್ಲಿ ಪಯ್ಯನ್ನೂರಿನಿಂದ ಆಗಮಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಕೂಡಲೇ ಅಲ್ಲಿಗೆ ತಲುಪಿದ ಸ್ಥಳೀ ಯರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವರಕ್ಷಿಸಲಾಗ ಲಿಲ್ಲ. ಮೃತದೇಹಗಳನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.