ಕಾರಡ್ಕ ಸೊಸೈಟಿ ವಂಚನೆ ಪ್ರಕರಣ: ಎನ್‌ಐಎ ಅಧಿಕಾರಿಯೆಂದು ತಿಳಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಸೂತ್ರಧಾರ ಸೆರೆ
ಮುಳ್ಳೇರಿಯ: ಕಾರಡ್ಕ ಅಗ್ರಿ ಕಲ್ಚರಿಸ್ಟ್ ವೆಲ್ಫೇರ್ ಕೋ-ಓಪರೇಟಿವ್ ಸೊಸೈಟಿಯಿಂದ ೪.೭೬ ಕೋಟಿ ರೂಪಾಯಿ ವಂಚನೆ ನಡೆಸಿದ ಪ್ರಕರಣ ದಲ್ಲಿ ಸೂತ್ರಧಾರ ತನಿಖಾ ತಂಡದ ಕಸ್ಟಡಿಗೊಳಗಾಗಿರುವುದಾಗಿ ಸೂಚನೆ ಲಭಿಸಿದೆ. ಕಲ್ಲಿಕೋಟೆ ರಾಮನಾಟುಕರ ನಿವಾಸಿ ನಬೀಲ್ (42) ಎಂಬಾತ ತನಿಖಾ ತಂಡದ ಕಸ್ಟಡಿಯಲ್ಲಿರುವ ವ್ಯಕ್ತಿ ಯಾಗಿದ್ದಾನೆ. ವಂಚನೆ ಪ್ರಕರಣದಲ್ಲಿ ಸೆರೆಗೀಡಾದ ಸೊಸೈಟಿಯ ಕಾರ್ಯ ದರ್ಶಿ ಕರ್ಮಂತ್ತೋಡಿ ಬಾಳಕಂಡದ ಕೆ. ರತೀಶನ್, ಕಣ್ಣೂರು ಚೊವ್ವ ನಿವಾ ಸಿಯೂ, ಪಯ್ಯನ್ನೂರಿನಲ್ಲಿ ವಾಸಿಸುವ ಜಬ್ಬಾರ್ ಯಾನೆ ಮಂಞಕಂಡಿ ಅಬ್ದುಲ್ ಜಬ್ಬಾರ್ ಎಂಬಿವರಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ನಬೀಲ್‌ನನ್ನು ಕಸ್ಟಡಿಗೆ ತೆಗೆದಿರುವುದಾಗಿ ಸೂಚನೆಯಿದೆ. ನಬೀಲ್‌ನ ಬಂಧನ ದಾಖಲಿಸುವುದ ರೊಂದಿಗೆ ಕೋಟ್ಯಂತರ ರೂಪಾಯಿಗಳ ವಂಚನೆ ಗೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಳು ಬಹಿರಂಗಗೊಳ್ಳಲಿದೆ ಯೆಂದು ತನಿಖಾ ತಂಡ ಅಂದಾಜಿಸಿದೆ.
ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಓಪರೇಟಿವ್ ಸೊಸೈಟಿಯಿಂದ ರತೀಶನ್ ಲಪಟಾಯಿಸಿದ ಎಲ್ಲಾ ಹಣವೂ ಜಬ್ಬಾರ್ ಮುಖಾಂತರ ನಬೀಲ್‌ನ ಕೈಗೆ ಸೇರಿದೆಯೆಂದು ಅವರಿಬ್ಬರು ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ನಬೀಲ್ ಹಾಗೂ ಜಬ್ಬಾರ್ ಸೇರಿ ನಕಲಿ ದಾಖಲೆಪತ್ರ ಸೃಷ್ಟಿಸಿ ವಂಚನೆ ನಡೆಸಿದ್ದಾರೆ. ಜಬ್ಬಾರ್‌ಗೆ ಬ್ರಿಟನ್‌ನಿಂದ ೬೭೩ ಕೋಟಿ ರೂಪಾಯಿ ಲಭಿಸಲಿದೆಯೆಂದು ತಿಳಿ ಸುವ ರಿಸರ್ವ್ ಬ್ಯಾಂಕ್‌ನ ಹೆಸರಿ ನಲ್ಲಿರುವ ನಕಲಿ ದಾಖಲೆಪತ್ರವನ್ನು ತೋರಿಸಿ ತಂಡ ವಂಚನೆ ನಡೆಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಿಸರ್ವ್ ಬ್ಯಾಂಕ್ ಗವರ್ನರ್ ಎಂಬಿವರ ನಕಲಿ ಸಹಿ ಹಾಕಿ ದಾಖಲೆಪತ್ರ ಸೃಷ್ಟಿಸಲಾಗಿತ್ತು. ಈಗ ಪೊಲೀಸರ ಸೆರೆಗೀಡಾದ ನಬೀಲ್ ಎನ್‌ಐಎ ಅಧಿಕಾರಿ ಯೆಂದು ತಿಳಿಸಿ ಕೋಟ್ಯಂತರ ರೂಪಾಯಿಗಳ ವಂಚನೆ ನಡೆಸಿ ರುವುದಾಗಿಯೂ ತನಿಖಾ ತಂಡಕ್ಕೆ ಸೂಚನೆ ಲಭಿಸಿದೆ. ಎನ್‌ಐಎ ಅಧಿಕಾರಿಗಳು ಉಪಯೋಗಿಸುವ ಓವರ್ ಕೋಟ್ ಧರಿಸಿ ನಬೀಲ್ ಬಂದೂಕು ಕೈವಶವಿರಿಸಿ ವ್ಯಕ್ತಿಗಳನ್ನು ಕಾಣಲು ತೆರಳುತ್ತಿದ್ದನೆಂದು ತಿಳಿದುಬಂದಿದೆ.
ರತೀಶನ್‌ಗೆ ಜಬ್ಬಾರ್‌ನನ್ನು ಪರಿಚಯಿಸಿದ್ದು ಯಾರು?
ಕುಂಬ್ಡಾಜೆ ನಿವಾಸಿಗಾಗಿ ಶೋಧ
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಓಪರೇಟಿವ್ ಸೊಸೈಟಿಯಿಂದ ೪.೭೬ ಕೋಟಿ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಆರೋಪಿಯಾದ ಸೆಕ್ರೆಟರಿ ರತೀಶನ್‌ಗೆ ಕಣ್ಣೂರು ಚೊವ್ವ ನಿವಾಸಿಯಾದ ಜಬ್ಬಾರ್‌ನನ್ನು ಪರಿಚಯಿಸಿದ ವ್ಯಕ್ತಿ ಯಾರೆಂದು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ನಿವಾಸಿಯೋರ್ವ ಇದರ ಹಿಂದೆ ಕಾರ್ಯಾಚರಿಸಿದ್ದಾನೆಂದು ತನಿಖಾ ತಂಡಕ್ಕೆ ಸೂಚನೆ ಲಭಿಸಿದೆ. ಆದ್ದರಿಂದ ಆ ವ್ಯಕ್ತಿ ಯಾರೆಂದು ತಿಳಿಯಲು ತನಿಖ ನಡೆಯುತ್ತಿದೆ. ಆತನನ್ನು ಪತ್ತೆಹಚ್ಚಿ ಕಸ್ಟಡಿಗೆ ತೆಗೆದು ಸಮಗ್ರ ವಿಚಾರಣೆ ನಡೆಸಿದರೆ ಈ ಭಾರೀ ವಂಚನೆಯ ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸಲು ಸಾಧ್ಯವಿದೆಯೆಂದೂ ತನಿಖಾ ತಂಡ ನಿರೀಕ್ಷೆಯಿರಿಸಿದೆ.
ಸೊಸೈಟಿಯಿಂದ ಲಪಟಾಯಿಸಿದ ಹಣದಲ್ಲಿ ಕುಂಬ್ಡಾಜೆ ನಿವಾಸಿಗೂ ಪಾಲು ಸಿಕ್ಕಿರಬಹು ದೆಂದೂ ಸಂಶಯಿಸಲಾಗುತ್ತಿದೆ. ಇದೇ ವೇಳೆ ಈ ವಂಚನಾ ಪ್ರಕರಣದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿದ್ದಾರೆಯೇ ಎಂದು ತಿಳಿಯಲಿರುವ ಪ್ರಯತ್ನವನ್ನು ತನಿಖಾ ತಂಡ ಇನ್ನೊಂದೆಡೆ ಮುಂದಿರಿಸಿದೆ.