ಕುಟುಂಬಶ್ರೀ ಅವಗಣಿಸಲು ಸಾಧ್ಯವಿಲ್ಲದ ಸಂಘಟನೆ- ಎ.ಎನ್. ಶಂಸೀರ್
ಹೊಸದುರ್ಗ: ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಎದುರಾಗಿ ಕುಟುಂಬಶ್ರೀ ಕಾರ್ಯಾಗಾರವನ್ನು ನಡೆಸಬೇಕೆಂದು ವಿಧಾನಸಭಾ ಅಧ್ಯಕ್ಷ ಎ.ಎನ್. ಶಂಸೀರ್ ನುಡಿದರು. ಕುಟುಂಬಶ್ರೀ, ನೆರೆಕರೆ ಕೂಟ ಆಕ್ಸಿಲರಿ ಸದಸ್ಯರ ರಾಜ್ಯ ಸರ್ಗೋತ್ಸವ ಪಿಲಿಕ್ಕೋಡ್ ಖಾಲಿಕಡವ್ ಮೈದಾನದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕುಟುಂಬಶ್ರೀ ಏಷ್ಯಾದಲ್ಲೇ ಅತ್ಯಂತ ದೊಡ್ಡ ಸ್ತ್ರೀ ಸಂಘಟನೆಯಾಗಿದೆ. ಸ್ತ್ರೀಯರ ಸಬಲೀಕರಣಕ್ಕಾಗಿ ರೂಪೀಕರಿಸಿದ ಸಂಘಟನೆ ಲಕ್ಷಾಂತರ ಮಹಿಳೆಯರ ಜೀವನಕ್ಕೆ ಪ್ರಯೋಜನಕರವಾಗಿ ಬದಲಾಗಿದೆ ಎಂದು ಸ್ಪೀಕರ್ ನುಡಿದರು. ಈ ಬಾರಿ ಕುಟುಂಬಶ್ರೀ ವತಿಯಿಂದ ಪೋಲಿಂಗ್ ಅಧಿಕಾರಿಗಳಿಗೆ ಆಹಾರ ನೀಡಿದ್ದು, ಇದರಿಂದ ಅಭಿನಂದನಾರ್ಹವಾದ ಸಾಧನೆ ನಡೆಸಿದೆ. ಆಧುನಿಕ ತಾಂತ್ರಿಕ ವಲಯದಲ್ಲೂ ಕುಟುಂಬಶ್ರೀ ತನ್ನ ಸಾಧನೆ ಮೆರೆದಿದೆ ಎಂದು ಅವರು ನುಡಿದರು. ಶಾಸಕ ಎ. ರಾಜಗೋಪಾಲ್ ಅಧ್ಯಕ್ಷತೆ ವಹಿಸಿದರು. ವರ್ಣರಂಜಿತ ಶೋಭಾಯಾತ್ರೆಯೊಂದಿಗೆ ಮೆರವಣಿಗೆ ನಡೆದ ಬಳಿಕ ಖಾಲಿಕಡವ್ ಮೈದಾನದಲ್ಲಿ ಕಾರ್ಯಕ್ರಮ ನಡೆದಿದೆ.
ಕುಟುಂಬಶ್ರೀ ಎಕ್ಸಿಕ್ಯೂಟಿವ್ ನಿರ್ದೇಶಕ ಜಾಫರ್ ಮಾಲಿಕ್ ಪ್ರಸ್ತಾಪಿಸಿದರು. ಶಾಸಕ ಇ. ಚಂದ್ರಶೇಖರನ್ ಲಾಂಛನ ತಯಾರಿಸಿದವರಿಗೆ ಬಹುಮಾನ ವಿತರಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.