ಕುಂಬಳೆಯಲ್ಲಿ ಕ್ರಿಕೆಟ್ ಆಟಗಾರನ ಸಾವಿನಲ್ಲಿ ನಿಗೂಢತೆ
ಕುಂಬಳೆ: ನಾಯ್ಕಾಪು ನಿವಾಸಿಯೂ ಕ್ರಿಕೆಟ್ ಆಟಗಾರನಾದ ಮಂಜುನಾಥ ನಾಯಕ್ (24)ರ ಸಾವಿನಲ್ಲಿ ನಿಗೂಢತೆಗಳಿವೆಯೆಂದು ಸಂಬಂಧಿಕರು ಹಾಗೂ ನಾಗರಿಕರು ಆರೋಪಿಸಿದ್ದಾರೆ. ಆದ್ದರಿಂದ ನಿಗೂಢತೆಗಳನ್ನು ಪತ್ತೆಹಚ್ಚಬೇಕೆಂದು ಒತ್ತಾಯಿಸಿ ಇಂದು ಸಂಜೆ ನಾಯ್ಕಾಪಿನಲ್ಲಿ ಕ್ರಿಯಾ ಸಮಿತಿ ರೂಪೀಕರಣ ಸಭೆ ನಡೆಸುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.
ಶನಿವಾರ ಮುಂಜಾನೆ 5.30 ವೇಳೆ ಮಂಜುನಾಥ ಮನೆ ಸಮೀಪದ ಮರದಲ್ಲಿ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶುಕ್ರವಾರ ಕಾಸರಗೋಡಿನಲ್ಲಿ ತಂಡ ವೊಂದು ಮಂಜುನಾಥರಿಗೆ ಹಲ್ಲೆಗೈದು ದಾಗಿ ಹೇಳಲಾಗುತ್ತಿದೆಯಾ ದರೂ ಅಲ್ಲಿಂದ ಅಪಾಯದಿಂದ ರಕ್ಷಿಸಿಕೊ ಳ್ಳಲು ಓಡಿ ಪಾರಾಗಿದ್ದನೆಂದು ಸಂಬಂ ಧಿಕರು ತಿಳಿಸಿದ್ದಾರೆ. ಮಂಜುನಾಥರಿಗೆ ಯಾರು ಯಾಕಾಗಿ ಹಲ್ಲೆಗೈದಿದ್ದಾರೆಂದು ಪತ್ತೆಹಚ್ಚಬೇಕು. ಶುಕ್ರವಾರ ರಾತ್ರಿ ಊಟ ಮಾಡಿ ನಿದ್ರಿಸಿದ್ದ ಮಂಜುನಾ ಥರಿಗೆ 11.30ರ ವೇಳೆ ಪೋನ್ ಕರೆಯೊಂದು ಬಂದಿತ್ತು. ಫೋನ್ನಲ್ಲಿ ಮಾತನಾಡುತ್ತಾ ಮಂಜುನಾಥ ಮನೆಯಿಂದ ಹೊರಗೆ ತೆರಳಿದ್ದರು. ಅನಂತರ ಮರಳಿ ಬಂದಿರಲಿಲ್ಲ. ಫೋನ್ ಕರೆ ಮಾಡಿದವರು ಯಾರೆಂದು ಪತ್ತೆ ಹಚ್ಚಬೇಕು. ಫೋನ್ನಲ್ಲಿ ಬೆದರಿಕೆಯೊಡ್ಡಿ ದುದರಿಂದ ಮಂಜು ನಾಥ ನೇಣು ಬಿಗಿದು ಆತ್ಮಹತ್ಯೆಗೈದಿ ದ್ದಾರೆಯೇ ಎಂದು ತನಿಖ ನಡೆಸಬೇಕು. ಅದಕ್ಕಾಗಿ ಸಮಗ್ರ ತನಿಖೆ ನಡೆಸಬೇಕೆಂದೂ ಸಂಬಂಧಿಕರು ಒತ್ತಾಯಿಸಿದ್ದಾರೆ. ಮಂಜುನಾಥರ ಸಾವಿನ ಕುರಿತು ತನಿಖೆ ಆರಂಭಿಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು ಜನರಲ್ ಆಸ್ಪ ತ್ರೆಯಲ್ಲಿ ಮಂಜುನಾಥರ ಮೃತದೇಹ ವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆ ಹಿತ್ತಿಲಿನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.