ಬೈಕ್ ಢಿಕ್ಕಿ ಹೊಡೆದು ಲಾಟರಿ ಮಾರಾಟಗಾರ ದಾರುಣ ಸಾವು
ಕಾಸರಗೋಡು: ಬೈಕ್ ಢಿಕ್ಕಿ ಹೊಡೆದು ಲಾಟರಿ ಮಾರಾಟಗಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೂಡ್ಲು ಚೌಕಿ ಕನ್ನಿಲ್ ಕೆ.ಕೆ.ಪುರಂ ಹೌಸ್‌ನ ವಿಜಯನ್ (56) ಎಂಬವರು ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ರಾತ್ರಿ ಚೌಕಿಯಿಂದ ಕಂಬಾರಿಗೆ ಹೋಗುತ್ತಿದ್ದ ದಾರಿ ಮಧ್ಯೆ ಹಿಂಭಾಗದಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಢಿಕ್ಕಿ ಹೊಡೆದ ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಅದನ್ನು ಚಲಾಯಿಸಿದ ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ್ದಾರೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆಗೊಳಪಡಿ ಲಾಯಿತು. ಮೃತರು ಪತ್ನಿ ಜಯಂತಿ, ಮಕ್ಕಳಾದ ರಂಜಿತ್ (ಅಂಚೆ ಕಚೇರಿ ಸಿಬ್ಬಂದಿ), ಮಂಜುಳ (ನ್ಯಾಯಾಲಯ ಸಿಬ್ಬಂದಿ), ಮಾಲತಿ, ಸೊಸೆ ಮಾಯಾ, ಅಳಿಯಂದಿರಾದ ರತೀಶ್, ನಿಖೇಶ್, ಸಹೋದರಿಯರಾದ ನಾರಾಯಣನ್, ಪ್ರೇಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.